ನವದೆಹಲಿ : ವಾಣಿಜ್ಯ ಬಳಕೆಯ ಎಲ್.ಪಿ.ಜಿ. ಸಿಲಿಂಡರ್ಗಳ ಬೆಲೆ 102.50 ರೂ. ಹೆಚ್ಚಿಸಿದ್ದು, ಇದರಿಂದ ಸಿಲಿಂಡರ್ ದರ 2355.50 ರೂ.ಗಳಿಗೆ ತಲುಪಿದೆ.
ಐದು ಕೆಜಿ ಸಿಲಿಂಡರ್ ದರ 655 ರೂ.ಗಳಿಗೆ ನಿಗದಿಪಡಿಸಲಾಗಿದೆ. ಮಾ. 1 ರಂದು ವಾಣಿಜ್ಯ ಸಿಲಿಂಡರ್ಗಳ ದರ 105 ರೂ. ಹೆಚ್ಚಸಲಾಗಿತ್ತು. ನಂತರ ಏಪ್ರಿಲ್ 1 ರಂದು 250 ರೂ. ಜಾಸ್ತಿ ಮಾಡಲಾಗಿತ್ತು. ಇದೀಗ ಮತ್ತೆ ಹೆಚ್ಚಳವಾಗಿದೆ. ಇದರಿಂದ ಕಳೆದ ಎರಡು ತಿಂಗಳಲ್ಲಿ ಮೂರು ಬಾರಿ ಹೆಚ್ಚಿಸಿದ್ದು, ಗ್ರಾಹಕರ ಮೇಲೆ 462.50 ರೂ. ಹೆಚ್ಚುವರಿ ಹೊರೆ ಹಾಕಿದಂತಾಗಿದೆ.
14.2 ಕೆ.ಜಿ ತೂಕದ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಕಳೆದ ವರ್ಷದ ಅಕ್ಟೋಬರ್ ನಂತರ ಮೊದಲ ಬಾರಿಗೆ ಮಾರ್ಚ್ನಲ್ಲಿ ದರ ಏರಿಕೆ ಮಾಡಲಾಗಿತ್ತು. ಆನಂತರ ಎರಡು ತಿಂಗಳಿAದ ದರಗಳಲ್ಲಿ ಸ್ಥಿರತೆ ಕಾಯ್ದಕೊಳ್ಳಲಾಗಿದೆ.
Leave a Comment