ಕಾರವಾರ: ಅಚವೆ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಶಾಲೆಗಳಲ್ಲಿ ಮುಖ್ಯ ಸಹಾಯಕ ಅಡುಗೆ ಸಿಬ್ಬಂದಿಯವರ ತೆರವಾದ ಸ್ಥಾನಗಳಿಗೆ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಹಿರಿಯ ಪ್ರಾಥಮಿಕ ಶಾಲೆ ಅಂಗಡಿಬೈಲ್ (ಸ.ಅ), ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾಬಗಿ (ಮು.ಅ), ಸರಕಾರಿ ಹಿರಿಯ ಶಾಲೆ ಕುಂಟಗಣಿ (ಮು.ಅ), ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಸಳ್ಳಿ (ಮು.ಅ) ಶಾಲೆಗಳಲ್ಲಿ ಮುಖ್ಯ/ ಸಹಾಯಕ ಅಡುಗೆ ಸಿಬ್ಬಂದಿ ಹುದ್ದೆಗಳು ಖಾಲಿಯಿದ್ದು ಆಸಕ್ತರು ಮೇ 14ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಇರುವ ನಿಯಮಾವಳಿಗಳು: ಅಭ್ಯರ್ಥಿಗಳು ಅದೇ ಗ್ರಾಮದವರಾಗಿರಬೇಕು. ಅಭ್ಯರ್ಥಿಗಳು ಕಡ್ಡಾಯವಾಗಿ ಮಹಿಳೆಯರಾಗಿರಬೇಕು. ಮುಖ್ಯ ಅಡುಗೆಯವರು ಕನಿಷ್ಠ 7 ನೇ ತರಗತಿ ಉತ್ತೀರ್ಣರಾಗಿರಬೇಕು. ಸಹಾಯಕ ಅಡುಗೆ ಸಿಬ್ಬಧಿಗೆ ವಿದ್ಯಾರ್ಹತೆಯನ್ನು ನಿಗದಿಪಡಿಸಿಲ್ಲ. ಆದರೆ ಸಾಕ್ಷರರಾಗಿರುವವರಿಗೆ ಪ್ರಥಮ ಆಧ್ಯತೆ,
ಅಭ್ಯರ್ಥಿಗಳು 30- 40 ವರ್ಷದ ಒಳಗಿರಬೇಕು ವಿಧವೆಯರು, ಸಂಕಷ್ಟದಲ್ಲಿರುವ ಮಹಿಳೆಯರಿಗೆ ಪ್ರಥಮ ಆದ್ಯತೆ, ಅಕ್ಷರ ದಾಸೋಹ ಸಿಬ್ಬಂದಿ ನೇಮಕಾತಿಯು ಸರಕಾರದ ಸುತ್ತೋಲೆಯಂತೆ ನೇಮಕಾತಿ ಮಾಡಲಾಗುವುದು.
ಅಭ್ಯರ್ಥಿಗಳು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು ವಿದ್ಯಾರ್ಹತೆಗೆ ಸಂಬAಧಿಸಿದ ಎಲ್ಲಾ ಮೂಲ ದಾಖಲೆಗಳು,ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಆಧಾರ ಕಾರ್ಡ, ತಮ್ಮ ಇತ್ತೀಚಿನ ಪಾಸ್ಪೋರ್ಟ ಅಳತೆಯ ಎರಡು ಭಾವಚಿತ್ರ, ಜಾತಿ ಪ್ರಮಾಣ ಪತ್ರ, ಅರ್ಜಿಯಲ್ಲಿ ಕಡ್ಡಾಯವಾಗಿ ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸುವುದು.
ನೇಮಕಾತಿಯನ್ನು ಆಡಳಿತಾತ್ಮಕ ಕಾರಣದಿಂದ ತಡೆಹಿಡಿಯುವ ನೇಮಕಾತಿ ಸ್ಥಗಿತಗೊಳಿಸುವ ಅಧಿಕಾರ ಗ್ರಾಮ ಪಂಚಾಯತದ ಮೇಲೆ ನಿಹಿತವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಚವೆ ಗ್ರಾಮ ಪಂಚಾಯತ್ ಕಾರ್ಯಾಲಯವನ್ನು ಸಂಪರ್ಕಿಸಬಹುದೆAದು ಅಚವೆ ಗ್ರಾಮ ಪಂಚಾಯತ್ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
job info; Join our whatsapp group
Leave a Comment