ಹೊನ್ನಾವರ : ಫೆಕ್ ಅಂಕೌAಟ್ಸ್ಗಳನ್ನ ಕ್ರಿಯೆಟ್ ಮಾಡಿಕೊಂಡು ಸಮಾಜದ ಸ್ವಾಸ್ಥö್ಯ ಹಾಳುಗೆಡಗುವವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತೆವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಪೆನ್ನೇಕರ್ ತಿಳಿಸಿದ್ದಾರೆ.
ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜನಪ್ರತಿನಿಧಿಗಳು, ಹಾಗೂ ಇತರೆ ವ್ಯಕ್ತಿಗಳ ಬಗ್ಗೆ ತೇಜೋವಧೆ ಮಾಡುತ್ತಿರುವ ಬಗ್ಗೆ ಕೆಲ ಖಾತೆಗಳ ವಿರುದ್ಧ ದೂರುಗಳು ಬಂದಿವೆ. ಈ ಹಿಂದಿAದಲೂ ಕೂಡ ಇದರ ಬಗ್ಗೆ ತನಿಖೆ ನಡೆಯುತ್ತಿದೆ. ಫೇಕ್ ಖಾತೆ ತೆರದು, ಗ್ರೂಫ್ ಮಾಡಿ ಸುಳ್ಳು ಸುದ್ದಿ ಹಬ್ಬಿಸಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಅಂಥವರ ಮೇಲೆ ಕ್ರಮ ತೆಗೆದುಕೊಳ್ಳಲು ಸೈಬರ್ ಅಧಿಕಾರಿಗಳ ಸಹಾಯ ಪಡೆದಿದ್ದೇವೆ. ಅಧಿಕಾರಿಗಳು ಕೂಡ ಮಾಹಿತಿ ನೀಡುತ್ತಿದ್ದಾರೆ. ಮುಂದೆ ಯಾರು ಕೂಡಾ ಇಂತಹ ಕೆಲಸಕ್ಕೆ ಮುಂದಾಗಬೇಡಿ. ತನಿಖೆ ಚುರುಕುಗೊಳಿಸಿ ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
ಮಹಿಳೆ ನಾಪತ್ತೆ ಪ್ರಕರಣ ಹಿಂದಿನಿAದಲೂ ನಡೆಯುತ್ತಿದ್ದು, ಕೆಲ ಪ್ರಕರಣಗಳಲ್ಲಿ ಸ್ವಯಂ ಪ್ರೇರಿತರಾಗಿ ಬೇರಡೆಗೆ ಹೋಗಿದ್ದು, ಇನ್ನು ಕೆಲವು ಪತ್ತೆಯಾಗಿದೆ. ಇಂತಹ ಪ್ರಕರಣ ದಾಖಲಾಗುತ್ತಿದ್ದಂತೆ ವಿಶೇಷ ಮುತುವರ್ಜಿ ವಹಿಸುತ್ತಿದ್ದು, ಹಲವು ಪ್ರಕರಣಗಳನ್ನು ಛೇದಿಸಲಾಗಿದೆ ಎಂದರು.
Leave a Comment