ಭಟ್ಕಳ: ಅನಧಿಕೃತವಾಗಿ ಸಂಗ್ರಹಿಸಿಟ್ಟ ವಿದೇಶಿ ಸಿಗರೇಟ
ಗೋದಾಮಿನ ಮೇಲೆ ನಗರ ಠಾಣೆಯ ಪೊಲೀಸರು ದಾಳಿ ನಡೆಸಿ 7 ಬಾಕ್ಸ್ ಸಿಗರೇಟನ್ನು ವಶಪಡಿಸಿಕೊಂಡ ಘಟನೆ ಚೌಕ್ ಬಜಾರ್ ನಲ್ಲಿ ನಡೆದಿದೆ
ತಾಲೂಕಿನಲ್ಲಿ ವಿದೇಶಿ ಸಿಗರೇಟ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು ತಾಲೂಕಿನ ಯುವಕರು ಇದರ ವ್ಯಸನಿಗಳಾಗುತ್ತಿದ್ದಾರೆ. ಈ ಹಿನ್ನೆಲೆ ನಗರ ಠಾಣೆಯ ಸಿ.ಪಿ.ಐ ದಿವಾಕರ ನೇತೃತ್ವದಲ್ಲಿ ತಾಲೂಕಿನ ಚೌಕ್ ಬಜಾರನಲ್ಲಿರುವ ಆರೋಪಿ ಮರಜುಕ್ ಅಹ್ಮದ್ ಎನ್ನುವವರ ಗೋದಾವೊಂದರಲ್ಲಿ ಸಂಗ್ರಹಿಸಿಟ್ಟ 2,27,500 ರೂಪಾಯಿ ಮೌಲ್ಯದ ವಿನ್ ಕಂಪನಿಯ 3500 ವಿದೇಶಿ ಸಿಗರೇಟನ್ನು ವಶಪಡಿಸಿಕೊಂದಿದ್ದಾರೆ. ಈ ವಿದೇಶಿ ಸಿಗರೇಟ್ ತಂಬಾಕು ಉತ್ಪನ್ನಗಳ ಪ್ಯಾಕೆಟ್ ಮೇಲೆ ಕಾನೂನು ಮತ್ತು ನಿಯಮಾವಳಿಗಳ ಪ್ರಕಾರ ಪ್ಯಾಕೆಟನ ಪ್ರತಿಶತ 85%ರಷ್ಟು ಪ್ರಮುಖ ಜಾಗದಲ್ಲಿ ಆರೋಗ್ಯದ ಬಗ್ಗೆ ಎಚ್ಚರಿಕೆ ನೀಡುವ ಸಂದೇಶವನ್ನು ಅಸಮರ್ಪಕವಾಗಿ ತಂಬಾಕು ಉತ್ಪನ್ನವನ್ನು ತಮ್ಮ ವಶದಲ್ಲಿಟ್ಟು ಕೊಂಡು 18 ವರ್ಷದೊಳಗಿನ ಅಪ್ರಾಪ್ತ ಮಕ್ಕಳಿಗೆ ಮಾರಾಟಮಾಡುತ್ತಿದ್ದಾಗ ದಾಳಿ ನಡೆಸಿದ್ದಾರೆ. ಈ
ದಾಳಿ ಪ್ರಕರಣವು ತಾಲೂಕಿನಲ್ಲಿ ಮೊದಲ ಬಾರಿಗೆ ನಡೆದಿರುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದು. ಕೊಟ್ಪಾ ಕಾಯ್ದೆ ಅಡಿಯಲ್ಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಸಿ.ಪಿ.ಐ ದಿವಾಕರ, ಪಿ.ಎಸ್.ಐ ಗಳಾದ ಸುಮಾ ಆಚಾರ್ಯ, ಹನುಮಂತಪ್ಪ ಕುಡುಗುಂಟಿ ,ಯಲ್ಲಪ್ಪ ಮಾಹದರ್ ಹಾಗೂ ಸಿಬ್ಬಂದಿಗಳಾದ ನಾರಾಯಣ ನಾಯ್ಕ, ಲೋಕೇಶ ಕಪ್ಪಿ, ನಾಗರಾಜ ಮೊಗೇರ, ಸಿದ್ದು ಕಾಂಬ್ಳೆ, ಸಿದ್ದು, ಈರಣ್ಣ ಉಪಸ್ಥಿತರಿದ್ದರು
Leave a Comment