ಕಾರವಾರ : ಕೆನರಾ ಬ್ಯಾಂಕ್ ದೇಶಪಾಂಡೆ ಅರ್ ಸೆಟ್ ಸಂಸ್ಥೆ ಹಳಿಯಾಳ ಹಾಗೂ ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯದಡಿಯಲ್ಲಿ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ ಯುವತಿಯರಿಗಾಗಿ ವಿವಿಧ ರೀತಿಯ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಯನ್ನು ಊಟ ವಸತಿಯೊಂದಿಗೆ ಉಚಿತವಾಗಿ ನೀಡಲಾಗುವುದು. ಆಸಕ್ತ ೧೮ ರಿಂದ ೪೫ ರ ವರ್ಷದೊಳಗಿನ ಕಾಮರ್ಸ್ ಓದಿದ ನಿರುದ್ಯೋಗಿ ಯುವಕ ಯುವತಿಯರಿಗಾಗಿ ೧೦ ದಿನಗಳ ಪೇಪರ್ ಕವರ್, ಬ್ಯಾಗ್ ಮತ್ತು ಲಕೋಟೆಗಳ ತಯಾರಿಕೆ ತರಬೇತಿ, ಹಾಗೂ ಫಾಸ್ಟ್ ಫುಡ್ ತರಬೇತಿ, ನಿರುದ್ಯೋಗಿ ಯುವಕರಿಗಾಗಿ ೧೩ ದಿನಗಳ ಸಿ.ಸಿ ಕ್ಯಮರಾ ದುರಸ್ತಿ ಮತ್ತು ಅಳವಡಿಕೆ ತರಬೇತಿ, ೩೦ ದಿನಗಳ ಎಲೆಕ್ಟಿçಕ್ ಮೋಟಾರ್ ರಿವೈಂಡಿAಗ್ ತರಬೇತಿ ನೀಡಲಾಗುವುದು.
ತರಬೇತಿಯಲ್ಲಿ ಭಾಗವಹಿಸಲು ಆಸಕ್ತರು ಹಳಿಯಾಳದ ಕೆನರಾ ಸಂಸ್ಥೆಯ ಕಚೇರಿಯನ್ನು ಮೇ ೧೫ ರೊಳಗೆ ಸಂಪರ್ಕಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆ ದೂರವಾಣಿ ಸಂಖ್ಯೆ : 9483485489, 9482188780, 9844796998, 8197022501, 08284-295307 ಗೆ ಸಂರ್ಕಿಸಬಹುದೆAದು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆಯ ನಿದೇರ್ಶಕ ಪ್ರಸನ್ನಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment