ಸಿದ್ದಾಪುರ: ತಾಲೂಕಿನ ಕಾನಸೂರು ಸಮೀಪದ ಗಿರಗಡ್ಡೆ ಬಳಿಯ ಈರಗೊಪ್ಪದಿಂದ ಸೀಮಾ ರಾಜು ನಾಯ್ಕ (28) ಎಂಬ ವಿವಾಹಿತ ಮಹಿಳೆ ಕಾಣೆಯಾಗಿರುವ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಕ್ಕಳನ್ನು ನೋಡಿಕೊಂಡು ಮನೆ ಕೆಲಸ ಮಾಡಿಕೊಂಡು ಇದ್ದ ಈಕೆ ಮೇ 7 ರ ಬೆಳಗ್ಗೆ 11 ಗಂಟೆಗೆ ಇಲ್ಲಿಯೇ ಹೋಗಿ ಬರುತ್ತೇನೆಂದು ಮಕ್ಕಳಿಗೆ ಹೇಳಿ ಬಟ್ಟೆ ಹಾಗೂ ಮೊಬೈಲ್ ತೆಗೆದುಕೊಂಡು ಹೋದವಳು ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆಂದು ದೂರಿನಲ್ಲಿ ತಿಳಿಸಲಾಗಿದೆ.
Leave a Comment