ಶಿರಸಿ: ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಮಂಗಳವಾರ ತಾಲೂಕಿನ ಭಾಶಿ ಗ್ರಾ.ಪಂ. ವ್ಯಾಪ್ತಿಯ ನರೂರ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ದೇವಸ್ಥಾನದ ಆವಾರದಲ್ಲಿ ಭಕ್ತಾದಿಗಳೊಂದಿಗೆ ಕೆಂಡ ಹಾಯುವ ಸೇವೆಯಲ್ಲಿ ಪಾಲ್ಗೊಂಡು ಸ್ವತಃ ಕೆಂಡ ಹಾಯ್ದರು.
ಭಾಶಿಯ ಶ್ರೀ ವೀರಭದ್ರೇಶ್ವರ ಹಾಗೂ ನಾಗಚೌಡೇಶ್ವರಿನೂತನ ಶಿಲಾಮೂರ್ತಿಗಳ ಪ್ರಾಣಪ್ರತಿಷ್ಠಾ ಕಾರ್ಯಕ್ರಮದಲ್ಲಿ ಸಚಿವರು ಪಾಲ್ಗೊಂಡಿದ್ದರು. ಪಕ್ಕದಲ್ಲಿ ಹರಕೆ ಸಲ್ಲಿಸುವವರಿಗಾಗಿ ಕೆಂಡ ಹಾಯುವ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಅಳುಕಿಲ್ಲದೆ ಸಚಿವರು ಸಹ ಕೆಂಡ ಹಾಯ್ದರು.
Leave a Comment