ಶಿರಸಿ : ಯಕ್ಷಗಾನ ಬಾಲ ಕಲಾವಿದೆ. ವಿಶ್ವಶಾಂತಿ ಸರಣಿ ಯಕ್ಷನೃತ್ಯ ರೂಪಕಗಳನ್ನು ಪ್ರಸ್ತುತಗೊಳಿಸುವ ಶಿರಸಿಯ ತುಳಸಿ ಹೆಗಡೆ ಅವಳಿಗೆ ಮಹಾರಾಷ್ಟçದ ನ್ಯಾಶನಲ್ ಅಕಾಡೆಮಿ ಫಾರ್ ಆರ್ಟ್ ಎಜ್ಯುಕೇಶನ್ ನೀಡುವ ಇಂಡಿಯನ್ ಸ್ಟಾರ್ ಐಕಾನ್ ಕಿಡ್ ಅಚೀವರ್ಸ್ ಅವಾರ್ಡ್ ಲಭಿಸಿದೆ.
ಭಾರತದ ವಿವಿಧೆಡೆಯ ಮಕ್ಕಳ ಸಾಂಸ್ಕೃತಿಕ ಹಾಗೂ ಕ್ರೀಡಾ ಸಾಧನೆ ಪರಿಗಣಿಸಿ ನೀಡಲಾಗುವ ಪ್ರಶಸ್ತಿ ಇದಾಗಿದೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ನ್ಯಾಶನಲ್ ಅಕಾಡೆಮಿ ಫಾರ್ ಅರ್ಟ್ ಎಜ್ಯುಕೇಶನ್ ಜೊತೆಗೆ ನವಭಾರತ ರಾಷ್ಟಿçÃಯ ಜ್ಞಾನಪೀಠ ಸಂಸ್ಥೆ, ಸುರಭಿ ಎಂಬುದು ಉಲ್ಲೇಖನಿಯ.
ಆಲ್ ಇಂಡಿಯಾ ಚೈಲ್ಡ್ ಆರ್ಟ್ ಎಕ್ಸಿಬಿಶನ್ ಸೊಸೈಟಿ, ನ್ಯಾಶನಲ್ ಎಕನಾಮಿಕ್ಸ್ ಗ್ರೋಥ್ ಟೈಮ್ಸ್ ಕೂಡ ಸಹಕಾರ ನೀಡಿವೆ. ತುಳಸಿ ಹೆಗಡೆ ತನ್ನ ಮೂರೂವರೆ ವರ್ಷಕ್ಕೇ ಯಕ್ಷಗಾನ ವೇಷ ಮಾಡಿದ ಬಾಲೆಯಾಗಿದ್ದು, ಕಳೆದ ಏಳು ವರ್ಷಗಳಿಂದ ಏಳು ವಿಶ್ವಶಾಂತಿ ಸರಣಿ ಯಕ್ಷನೃತ್ಯ ರೂಪಕ ಪ್ರಸ್ತುತಗೊಳಿಸುತ್ತ ನಾಡು ಹೊರ ನಾಡುಗಳಲ್ಲಿ ವಿಶ್ವಶಾಂತಿ ಸಂದೇಶವನ್ನು ಯಕ್ಷನೃತ್ಯ ಮೂಲಕ ಸಾರುತ್ತಿದ್ದಾಳೆ ಎಂದು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ತುಳಸಿ ವಿಶ್ವಶಾಂತಿ ಸರಣಿ ರೂಪಕಗಳ ಪ್ರಸುತ್ತಿ ಕುರಿತು ಇಂಟರ್ ನ್ಯಾಶನಲ್ ಬುಕ್ ಆಫ್ ರೆಕಾರ್ಡ್ನಲ್ಲೂ ದಾಖಲಾಗಿದೆ.
Leave a Comment