ಹೊನ್ನಾವರ : ಪಟ್ಟಣದ ಮಹಾಲಕ್ಷೀ ಗ್ಯಾಸ್ ಗೋಡಾನ್ ಪಕ್ಕದ ಬಂದರ್ ರಸ್ತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ 66 ಗ್ರಾಂ ಗಾಂಜಾ ಇರುವ 7 ಪ್ಯಾಕೇಟ್ ಗಳನ್ನಿಟ್ಟುಕೊಂಡಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಗಾಂಜಾ ಸಮೇತ ವಶಪಡಿಸಿಕೊಂಡ ಘಟನೆ ನಡೆದಿದೆ.
ಆರೋಪಿತರು ಪಟ್ಟಣದ ಬಿಇಓ ಆಫೀಸ್ ರಸ್ತೆಯನಿವಾಸಿ ಸುಹಾಸ ರೋಡ್ರಿಗಿಸ್, ರಾಯಲಕೇರಿಯ ಚಿನ್ನದ ಪಾಲೇಕರ, ಜಡ್ಡಿಕೇರಿಯ ಅಭಿಷೇಕ ನಾಯ್ಕೆ, ಗುಣವಂತೆಯ ಜಗದೀಶ ಗೌಡ ಎಂದು ಗುರುತಿಸಲಾಗಿದೆ. ಶುಕ್ರವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಅನಧಿಕೃತವಾಗಿ 66 ಗ್ರಾಂ ತೂಕದ ಸುಮಾರು 3500 ರೂಪಾಯಿ ಮೌಲ್ಯದ ಗಾಂಜಾ ಇರುವ 7 ಪ್ಯಾಕೇಟ್‌ಗಳನ್ನು ಬಂದರ್ ರಸ್ತಯ ಬದಿಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ತಮ್ಮ ಬಳಿ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಗಾಂಜಾ ಹಾಗೂ ಸ್ಕೂಟಿ ವಶಪಡಿಸಿಕೊಂಡು ಆರೋಪಿತರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Leave a Comment