ಭಟ್ಕಳ : ಪೊಲೀಸ್ ಜೀಪ್ ಡಿಕ್ಕಿಯಾಗಿ ಮಹಿಳೆಯೋರ್ವಳು ಮೃತಪಟ್ಟಿರುವ ಘಟನೆ ಇಲ್ಲಿನ ಶಿರಾಲಿ ಯಲ್ಲಿನ ರಾಷ್ಟಿçÃಯ ಹೆದ್ದಾರಿಯಲ್ಲಿ ಹಾದಿಮಾಸ್ತಿ ದೇವಸ್ಥಾನ ಎದುರು ಸಂಭವಿಸಿದೆ.
ಭಟ್ಕಳದ ಹಿಂದೂ ಕಾಲೋನಿಯ ನಿವಾಸಿ ವಿಜಯಾ ರಘು ಹೊನ್ನಾವರಕರ (69) ಮೃತಪಟ್ಟ ಮಹಿಳೆ. ಬೆಳಕೆಯಿಂದ ಶಿರಾಲಿಯ ಕಡೆಗೆ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಹೋಗುತ್ತರುವ ಸಂದರ್ಭದಲ್ಲಿ ಅವರಿಗೆ ಬೆಂಗಾವಲಾಗಿ ಪೊಲೀಸ್ ಜೀಪು ಸೈರನ್ ಹಾಕಿಕೊಂಡು ಹೋಗುತ್ತಿರುವಾಗ ಈ ಘಟನೆ ನಡೆದಿದೆ.
ಮಹಿಳೆ ರಸ್ತೆಯ ಅಡ್ಡ ಬರುತ್ತಿರುವುದನ್ನು ಕಂಡು ಜೀಪ್ ಚಾಲಕ ಬ್ರೇಕ್ ಹಾಕಿದರೂ ಜೀಪು ಚಾಲಕನ ನಿಯಂತ್ರಣ ತಪ್ಪಿ ಮಹಿಳೆಗೆ ಡಿಕ್ಕಿಯಾಗಿತ್ತು. ರಸ್ತೆಯ ಮೇಲೆ ಬಿದ್ದು ಗಾಯಗೊಂಡಿದ್ದ ಮಹಿಳೆಯನ್ನು ತಾಲೂಕಾ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸುವ ಪೂರ್ವದಲ್ಲಿ ಮೃತ ಪಟ್ಟಿದ್ದಾರೆನ್ನಲಾಗಿದೆ.
ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಬ್ ಇನ್ಸಪೆಕ್ಟರ್ ರತ್ನಾ ಎಸ್.ಕೆ. ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Leave a Comment