ಯಲ್ಲಾಪುರ: ಗಾಂಜಾ ಮಾರಾಟ ಮಾಡುತ್ತಿರುವಾಗ ದಾಳಿ ನಡೆಸಿದ ಪೊಲೀಸರು ವಕ್ತಿಯೋರ್ವನನ್ನು ಬಂಧಿಸಿ ಗಾಂಜಾವನ್ನು ವಶಪಡಿಸಿಕೊಂಡ ಘಟನೆ ತಾಲೂಕಿನ ಕಂಡ್ತಾçö್ಯನಕೊಪ್ಪದಲ್ಲಿ ನಡೆದಿದೆ. ರಾಮು ಸಕ್ಕು ಲಾಂಬೂರ್ ಬಂಧಿತ ವ್ಯಕ್ತಿ. ಈತನಿಂದ 1.21 ಕೆಜಿ ಗಾಂಜಾ ಮತ್ತು ಅದರ ಮಾರಾಟದಿಂದ ಸಂಗ್ರಹಿಸಿದ 10,000 ರೂ. ವಶಪಡಿಸಿಕೊಂಡು ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ.
ಇನ್ನೊಂದು ಪ್ರಕರಣ: ತಾಲೂಕಿನ ತಾಟವಾಳ ಗ್ರಾಮದ ಕಾರಕುಂಡಿ ಕ್ರಾಸ್ ಬಳಿ ರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ ಮಾರುತ್ತಿರುವ ಮಾಹಿತಿ ಮೇರೆಗೆ ಯಲ್ಲಾಪುರ ಪೊಲೀಸರು ದಾಳಿ ನಡೆಸಿ ಹಳಿಯಾಳದ ಭಾಗವತಿ ಗೌಳಿವಾಡದ ಜಾನಾಬಾಯಿ ಜೋರೆ, ಗಂಗಾರಾಮ ಜೋರೆಯನ್ನು ಬಂಧಿಸಿ, ಅವರಿಂದ 2.180 ಕೆಜಿ, ಗಾಂಜಾ ಹಾಗೂ ಮಾರಾಟದಿಂದ ಸಂಗ್ರಹಿಸಿದ 4,500 ರೂ. ವಶಪಡಿಸಿಕೊಂಡು ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿಎಸ್‌ಐಗಳಾದ ಅಮೀನ್ ಸಾಬ್ ಅತ್ತಾರ್, ಮಂಜುನಾಥ ಗೌಡ, ಶಿವಕುಮಾರ, ಎಎಸ್‌ಐಗಳಾದ ವಿಠಲ ಮಲವಾಡಕರ, ಸಿಬ್ಬಂದಿಗಳಾದ ನಾಗಪ್ಪ, ಗಜಾನನ, ಬಸವರಾಜ, ಚನ್ನಕೇಶವ, ನಂದೀಶ, ಮುತ್ತಣ್ಣ, ಮಂಜಪ್ಪ, ಸಂತೋಷ, ಗಿರೀಶ, ಕೃಷ್ಣ, ನೀಲನ್ ಮೋರೆ, ಸುಧಾ, ಶೋಭಾ ನಾಯ್ಕ, ಪತ್ರಾಂಕಿತ ಅಧಿಕಾರಿ ಶ್ರೀಕೃಷ್ಣ ಗಾಂವ್ಕರ, ಶ್ರೀಧರ ಯಲಿ ಗೌಡ, ಜ್ಯೋತಿ ನಾಯ್ಕ ಪಾಲ್ಗೊಂಡಿದ್ದರು.
Leave a Comment