ಹೊನ್ನಾವರ: ಪಟ್ಟಣದ ರಥಬೀದಿಯಲ್ಲಿರುವ ಪುರಾಣ ಪ್ರಸಿದ್ದ ಸ್ವರ್ಣಪುರಾಧೀಶ್ವರಿ ಶ್ರೀಮಹಾಕಾಳಿ ದೇವಿ ಸನ್ನಿಧಿಯಲ್ಲಿ ಮೇ 20ರಿಂದ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
20ರಂದು ಶ್ರೀದೇವಿಗೆ ಸ್ವರ್ಣಮುಖ, ರಜತ ಪಲ್ಲಕ್ಕಿ, ರಜತ ಉತ್ಸವಮೂರ್ತಿ, ಕಂಚಿನ ದೀಪ ಸ್ಥಂಭ, ಪ್ರಜ್ವಾಲನಾ ಸ್ವರ್ಣ ಮಾಂಗಲ್ಯ ಸಮರ್ಪಣೆ ನಡೆಯಲಿದೆ. 22ರಂದು ಶತಚಂಡಿಕಾಯಾಗ, ಬ್ರಹ್ಮಕಲಾಭಿಷೇಕ, ಮಹಾಪೂಜೆ ನಡೆಯಲಿದೆ.
ಮೂರು ದಿನವು ಮಧ್ಯಾಹ್ನ ಮಹಾಪೂಜೆಯ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ, ರಾತ್ರಿ 7 ಗಂಟೆಗೆ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ಸಂಘಟಕರು ಮನವಿ ಮಾಡಿದ್ದಾರೆ
Leave a Comment