ಶಿರಸಿ : ಕುತ್ತಿಗೆಗೆ ಬಿಗಿದು ಕೊಲೆಗೈದು ತೋಟದಲ್ಲಿ ಬಚ್ಚಿಟ್ಟು ಹೋಗಲಾದ, ಸುಮಾರು 35 ರಿಂದ 40 ವರ್ಷ ವಯಸ್ಸಿನ ಗಂಡಸಿನ ಶವ ತಾಲೂಕಿನ ಚಿಪಗಿ ತೋಟದಲ್ಲಿ ಕಂಡುಬAದಿದೆ.
ಯಾರೋ ದುಷ್ಕರ್ಮಿಗಳು ಅಂಗಿಯಿAದ ಈ ವ್ಯಕ್ತಿಯ ಕುತ್ತಿಗೆಗೆ ಬಿಗಿಯಾಗಿ ಕಟ್ಟಿ ಕೊಲೆ ಗೈದು ನಂತರ ಸಾಕ್ಷö್ಯ ನಾಶಪಡಿಸುವ ದೃಷ್ಟಿಯಿಂದ ಶವವನ್ನು ಅಲ್ಲೆ ಹತ್ತಿರವಿದ್ದ ತೋಟದ ಬಸಿಗಾಲಿವೆಯಲ್ಲಿ ಹಾಕಿ ಮಚ್ಚಿ ಹೋಗಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿತರ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿ ತನಿಖೆಗಿಳಿದಿದ್ದಾರೆ.
Leave a Comment