ಭಟ್ಕಳ: ತಾಲೂಕಿನ ಮುಟ್ಟಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ತಲಾಂದ ಗ್ರಾಮದ ಮಾಲ್ಕಿ ಜಮೀನಿನ ಗುಡ್ಡವೊಂದರಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾದ ಘಟನೆ ನಡೆದಿದೆ

ಮೃತ ದೇಹ ಕೊಳೆತ ಸ್ಥಿತಿಯಲ್ಲಿದ್ದು ಗುರುತು ಮತ್ತೆ ಹಚ್ಚದ ಸ್ಥಿತಿಯಲ್ಲಿದೆ. ಮೃತ ಮಹಿಳೆ ಅಂದಾಜು 30 ರಿಂದ 40 ವರ್ಷ ಎಂದು ಅಂದಾಜಿಸಲಾಗಿದ್ದು. ಅಲ್ಲಿನ ಸ್ಥಳೀಯರು ಮೃತ ದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ, ಸಿ.ಪಿ.ಐ ಮಾಹಾಬಲೇಶ್ವರ ನಾಯ್ಕ, ಪಿ.ಎಸ್.ಐ ಗಳಾದ ರತ್ನ ಕೆ ಹಾಗೂ ಸುಮಾ ಆಚಾರ್ಯ ಭೇಟಿ ನೀಡಿ ಪರಿಶೀಲಿಸಿ ಮೃತ ಮಹಿಳೆಯ ಮೃತ ದೇಹವವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಶವಾಗಾರದಲ್ಲಿ ಇರಿಸಲಾಗಿದು . ಪೊಲೀಸ ತನಿಖೆ ಚುರುಕುಗೊಂಡಿದೆ.

ಮೇಲ್ನೋಟಕ್ಕೆ ಶನಿವಾರ ಸಂಜೆ ಗುಳ್ಮಿ ಕ್ರಾಸನಲ್ಲಿರುವ ಅಂಗಡಿ ಸಮೀಪ ಈ ಮಹಿಳೆಯನ್ನು ವ್ಯಕ್ತಿಯೋರ್ವ ಬೈಕ್ ನಲ್ಲಿ ಕರೆದುಕೊಂಡು ಬಂದು ಅಲ್ಲಿಂದ ತಲಾಂದ ಗ್ರಾಮದ ನಿರ್ಜನ ಪ್ರದೇಶಕ್ಕೆ ಆಟೋ ಒಂದರಲ್ಲಿ ಕರೆದುಕೊಂಡು ಹೋಗಿ ಬಿಟ್ಟಿರುವ ಬಗ್ಗೆ ಆಟೋ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ
Leave a Comment