ಬೃಹತ್ ಬೆಂಗಳೂರು ಮಹಾನಗರದ ಪಾಲಿಕೆಯ ಕಾನೂನು ಕೋಶದ ಮುಖ್ಯಸ್ಥರ ಹುದ್ದೆ ಭರ್ತಿಗೆ ನೇಮಕ ಪ್ರಕಟಣೆ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು
ಇಲಾಖೆ ಹೆಸರು : ಬೃಹತ್ ಬೆಂಗಳೂರು ಮಹಾನಗರದ ಪಾಲಿಕೆ
ಹುದ್ದೆಗಳ ಹೆಸರು : ಕಾನೂನು ಕೋಶದ ಮುಖ್ಯಸ್ಥರ
ಅರ್ಹತೆಗಳು :
ಸೇವಾ ವಿಷಯಗಳಲ್ಲಿ ಕಾರ್ಮಿಕರ ಕಾನೂನು, ಭೂ ಕಾನೂನು ಇತ್ಯಾದಿ ವಿಷಯಗಳಲ್ಲಿ ಉತ್ತಮ ಪರಿಣಿತಿ ಹೊಂದಿದರುವ ನಿವೃತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಕೆಲಸ ನಿರ್ವಹಿಸಿರಬೇಕು. ಅಥವಾ
ಸಹಾಯಕ ಡ್ರಾಫ್ಟ್ಮನ್ ಹುದ್ದೆಗಿಂತ ಕಡಿಮೆ ಇಲ್ಲದ ಮತ್ತು ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿಯಾಗಿ ಸಂಸದೀಯ ವ್ಯವಹಾರಗಳ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ನಿವೃತ್ತ ಅಧಿಕಾರಿ ಆಗಿರಬೇಕು. ಅಥವಾ
ಕರ್ನಾಟಕದಲ್ಲಿ ಕನಿಷ್ಠ 10 ವರ್ಷಗಳ ವಕೀಲ ವೃತ್ತಿಯ ಅನುಭವ ಹೊಂದಿರುವ ವಕೀಲರು ಆಗಿರಬೇಕು.
ಅರ್ಜಿ ಸಲ್ಲಿಸಬಯಸುವವರು 67 ವರ್ಷ ವಯಸ್ಸು ಮೀರಿರಬಾರದು.
ಮುಖ್ಯ ಅಂಶಗಳು
ಹುದ್ದೆಯ ಅವಧಿ ಪ್ರಾರಂಭದಲ್ಲಿ 01 ವರ್ಷದವರೆಗಿರುತ್ತದೆ. ಕಾರ್ಯಕ್ಷಮತೆಯನ್ನು ಅಧರಿಸಿ 01 ರಿಂದ 03 ವರ್ಷಗಳವರೆಗೆ ವೃತ್ತಿಯಲ್ಲಿ ಮುಂದುವರೆಸಲಾಗುವುದು.
ಕೆಸಿಎಸ್ ಆರ್ ಗಳ ನಿಯಮಗಳ ಪ್ರಕಾರ ಅಭ್ಯರ್ಥಿಗಳಿಗೆ ವೇತನ ನಿಗಧಿಪಡಿಸಲಾಗುವುದು.
ಬಿಬಿಎಂಪಿ ಉದ್ಯೋಗಿಗಳಿಗಿರುವಂತೆ ರಜೆ ಮತ್ತು ವೈದ್ಯಕೀಯ ಸೌಲಭ್ಯಗಳು ಇರುತ್ತವೆ.
ಅಭ್ಯರ್ಥಿಗಳಿಗೆ ಸಂದರ್ಶನದ ಮೂಲಕ ನೇಮಕ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ :
ಅರ್ಜಿ ಸಲ್ಲಿಸುವ ಅಂಪೂರ್ಣ ಬಯೋಡಾಟಾ ಜತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ, ಅರ್ಜಿಗಳನ್ನು ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ
ಮಾನ್ಯ ಮುಖ್ಯ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಎನ್, ಆರ್, ಚೌಕ, ಬೆಂಗಳೂರು- 560002.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 26/05/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10/06/2022
job info; Join our whatsapp group
website; https://bbmp.gov.in/home
Leave a Comment