ಕುಮಟಾ : ಶಿರಸಿಯ ಹುಲೆಕಲ್ ಸೆಂಟ್ ಮಿಲಾಗ್ರಿಸ್ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಉದ್ಯೋಗ ಮಾಡುತ್ತಿದ್ದ ಯುವತಿಯನ್ನು ಯುವಕರ ತಂಡ ಅಪಹರಣ ಮಾಡಿರುವ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿರಸಿಯ ಹುಲೇಕಲ್ ನಿವಾಸಿ ಕಾಮಾಕ್ಷಿ ಪೈ (27) ಅಪಹರಣ ಕ್ಕೊಳಗಾದ ಯುವತಿ ಈಕೆಯ ಶೀರಸಿಯ ಹುಲೇಕಲ್ ನಿವಾಸಿ ಎಲ್.ಐ.ಸಿ ಎಜೆಂಟ್ ಸುಬ್ರಹ್ಮಣ್ಯ ಭಂಡಾರಿ ಎಂಬ ಯುವಕನನ್ನು ಪ್ರೀತಿಸುತ್ತಿದ್ದು, ಈ ವಿಷಯ ಮನೆಗೆ ತಿಳಿದಿದ್ದರಿಂದ ಆತಂಕಗೊAಡ ಯುವತಿಯ ಕುಟುಂಬಸ್ಥರು, ಆಕೆಗೆ ಬುದ್ದಿಮಾತು ಹೇಳಿದ್ದಾರೆ.
ಯುವಕನ ಕಡೆಯವರು ಯುವತಿಯಿದ್ದ ಮೆನೆಗೆ ಹೋಗಿದ್ದಾರೆ. ಅಲ್ಲದೇ ಮನೆಗೆ ನುಗಿ, ಯುವತಿಯ ಸಂಬಧಿಕರ ವೃದ್ದನ ಮೇಲೆ ಹಲ್ಲೆ ಮಾಡಿ, ಇತರಿಗೆ ಧಮಕಿ ಹಾಕಿ, ಯುವತಿಯನ್ನು ಅಲ್ಲಿಂದ ಅಪಹರಿಸಿದ್ದಾರೆಂದು ಯುವತಿಯ ಕುಟುಂಬಸ್ಥರು ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪಿ.ಎಸ್.ಐ ರವಿ ಗುಡ್ಡಿ ಅವರ ತಂಡ ತನಿಖೆ ಕೈಗೊಂಡಿದ್ದಾರೆ.
Leave a Comment