ಶಿವಮೊಗ್ಗ: ಅಡಿಕೆಯನ್ನು ಹೊತ್ತ ಲಾರಿ ನಿಗದಿತ ಪ್ರದೇಶಕ್ಕೆ ತಲುಪದೆ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಇಲ್ಲಿನ ಕೋಟೆ ರಸ್ತೆಯ ಮ್ಯಾಮೋಸ್ ಉಗ್ರಾಣದಿಂದ ಮೇ 25ರಂದು 250 ಕ್ವಿಂಟಾಲ್ ಅಡಿಕೆ ಹೊತ್ತ ಲಾರಿ ಅಹಮದಾಬಾದ್‌ನತ್ತ ಪ್ರಯಾಣ ಬೆಳೆಸಿತ್ತು. ಪೂರ್ವ ನಿಗದಿಯಂತೆ ಲಾರಿ ಮೇ 30ರಂದು ಅಹಮದಾಬಾದ್ ತಲುಪಬೇಕಿತ್ತು. ಆದರೆ, ಇದುವರೆಗೆ ತಲುಪಿಲ್ಲ. ಹೆಚ್ಚುವರಿ ಐದು ದಿನಗಳು ಕಳೆದರೂ ಲಾರಿ ಎಲ್ಲಿದೆ ಎಂಬುದೇ ತಿಳಿದಿಲ್ಲ. ಚಾಲಕನ ಮೊಬೈಲ್ ನೆಟ್‌ವರ್ಕ್ ವಾಪ್ತಿಯಲ್ಲಿಲ್ಲದ ಕಾರಣ ಉದ್ಯಮಿ ಡೋಲಾರಾಮ್ ಕೋಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಿವಮೊಗ್ಗ ಟಿಪ್ಪು ನಗರದ ಗೌಸ್ ಲಾರಿ ಚಾಲಕನಾಗಿದ್ದು, ಲಾರಿಯನ್ನು ಅಹರಿಸಲಾಗಿದೆಯೇ ಎಂಬ ಅನುಮಾನ ಕೂಡಾ ಕಾಡುತ್ತಿದೆ. ಈ ಹಿಂದೆ ಶಿವಮೊಗ್ಗದಿಂದ ವಿವಿಧೆಡೆಗೆ ಕಳುಹಿಸಿದ್ದ ಅಡಿಕೆಯನ್ನು ಲಾರಿ ಸಹಿತ ಅಪಹರಣ ಮಾಡಿದ ನಿದರ್ಶನಗಳಿದ್ದು, ಈ ಲಾರಿಯನ್ನು ಅಪಹರಣ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
Leave a Comment