ಕಾರವಾರ : ಸುಬಾಷ್ ಸರ್ಕಲ್ ಸಮೀಪದ ಸೀವ್ಯೂ ಹೊಟೆಲ್ ನಲ್ಲಿ ಗ್ರಾಹಕರೊಬ್ಬರ ಮೇಲೆ ಹೊಟೆಲಿನ ಸಿಬ್ಬಂದಿ ಮರಣಾಂತಿಕ ಹಲ್ಲೆ ನಡೆಸಿದ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ಶಿರವಾಡ ಗ್ರಾಮದ ಸೂಬಾಷ್ ವಡ್ಡರ್ ಎನ್ನುವ ವ್ಯಕ್ತಿ ಊಟಕ್ಕಾಗಿ ಸೀವ್ಯೂ ಹೊಟೆಲಿಗೆ ತೆರಳಿದ್ದ. ಊಟ ನೀಡುವ ವಿಷಯದಲ್ಲಿ ಹೊಟೆಲ್ ಸಿಬ್ಬಂದಿ ಹಾಗೂ ಸುಬಾಷ್ ನಡುವೆ ಮಾತಿಗೆ ಚಕಮಕಿ ನಡೆದು ಅದು ಅತಿರೇಕಕ್ಕೆ ಹೋದಾಗ ನಾಲ್ವರು ಸಿಬ್ಬಂದಿಗಳು ಸುಬಾಷ್ ನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ನೆಲದ ಮೇಲೆ ಬಿದ್ದಾಗ ಆತನನ್ನು ಬೂಟು ಕಾಲಿನಿಂದ ಒದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಯಿಂದ ರಕ್ತ ಒಸರುತ್ತಿದ್ದರೂ ಆತನನ್ನು ನಾಲ್ವರು ಯುವಕರು ಅಮಾನುಷವಾಗಿ ಥಳಿಸಿದ್ದರ ಬಗ್ಗೆ ಸಾರ್ವಜನಿಕರು ತೀವ್ರ ಆಕೋಶ ವ್ಯಕ್ತಪಡಿಸಿದ್ದಾರೆ. ಗಂಭೀರ ಗಾಯಗೊಂಡ ಸುಬಾಷನನ್ನು ನಂತರ ಅಸ್ಪತ್ರೆಗೆ ಸೇರಿಸಲಾಗಿದೆ. ಹಲ್ಲೆಯ ಕುರಿತು ಸುಬಾಷ ಅವರ ಸೋದರ ರಾಜು ಎನ್ನುವವರು ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಸಂಭAಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣಕ್ಕೆ ಸಂಬAಧಿಸಿದAತೆ ನಾಲ್ವರು ಹೊಟೆಲ್ ಸಿಬ್ಬಂದಿಯನ್ನು ಬಂಧಿಸಿದ್ದಾರೆ. ದಲಿತ ಯುವಕನ ಮೇಲೆ ಸೀವ್ಯೂ ಹೊಟೆಲ್ ನ ಸಿಬ್ಬಂದಿ ಹಲ್ಲೆ ನಡೆಸಿದ್ದನ್ನು ಖಂಡಿಸಿ ಶನಿವಾರ ರಾತ್ರಿಯವರೆಗೂ ಹಲವು ಸಂಘಟನೆಗಳಲ್ಲಿ ಗುರುತಿಸಿಕೊಂಡ ಜನರು ನಗರ ಠಾಣೆಯ ಎದುರು ಜಮಾಯಿಸಿರುವುದು ಕಂಡುಬAತು. ಆರೋಪಿಗಳನ್ನು ಬಂಧಿಸಿರುವ ಮಾಹಿತಿಯನ್ನು ಪೊಲೀಸ್ ಅಧಿಕಾರಿಗಳು ನೀಡಿದ ಬಳಿಕ, ಠಾಣೆ ಎದುರು ಜಮಾಯಿಸಿದ ಜನರು ಅಲ್ಲಿಂದ ತೆರಳಿದ್ದಾರೆ.
Leave a Comment