ಹೊನ್ನಾವರ : ಪಟ್ಟಣದ ಹೈವೇ ಸರ್ಕಲ್ ಬಳಿ ಬೀದಿ ವ್ಯಾಪಾರದ ಹೂವು, ಹಣ್ಣು ತರಕಾರಿ ಅಂಗಡಿಗಳು ಬೆಂಕಿಗೆ ಆಹುತಿಯಾದ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ.
ಗಣಪತಿ ಸೋಮಯ್ಯ ನಾಯ್ಕ ಅವರ ಹೂವಿನ ಅಂಗಡಿ, ಗೋವಿಂದ ಶೆಟ್ಟಿ ಅವರ ತರಕಾರಿ ಅಂಗಡಿ ಹಾಗೂ ಮಹೇಶ ನಾಗಪ್ಪ ನಾಯ್ಕ ಅವರ ಹಣ್ಣಿನ ಅಂಗಡಿಗಳು ಸುಟ್ಟು ಹೋಗಿವೆ. ವಿಷಯ ತಿಳಿದು ಅಗ್ನಿಶಾಮಕ ದಳವರು ಆಗಮಿಸಿ ಅಕ್ಕಪಕ್ಕ ಬೆಂಕಿ ಹರಡಂತೆ ತಡೆದಿದ್ದಾರೆ.
ಅಗ್ನಿ ಅವಗಡದಿಂದ ವ್ಯಾಪಾರಿಗಳು ತೀವ್ರ ನಷ್ಟ ಅನುಭವಿಸುವಂತಾಗಿದೆ. ಬೆಳಗಿನ ಜಾವ ಅಂಗಡಿ ಮುಚ್ಚಿದ್ದರಿಂದ ಸ್ಥಳದಲ್ಲಿ ಯಾರು ಇರಲಿಲ್ಲ. ತಹಶೀಲ್ದಾರ ನಾಗರಾಜ ನಾಯ್ಕಡ್ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Leave a Comment