ಕಾರವಾರ : ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿರುವ ರಂಗಶಿಕ್ಷಣ ಡಿಪ್ಲೋಮಾಕ್ಕೆ ಅರ್ಜಿ ಆಹ್ವಾನ ಆಸಕ್ತ ಎಸ್, ಎಸ್, ಎಲ್,ಸಿ ಪೂರ್ಣಗೊಂಡ ಅಭ್ಯರ್ಥಿಗಳು https://www.theatreschoolsanehalli.org/ ನಲ್ಲಿ ಪ್ರವೇಶ ಅರ್ಜಿ ಪಡೆದು ಶಿವಕುಮಾರ ರಂಗಪ್ರಯೋಗ ಶಾಲೆ ಸಾಣೇಹಳ್ಳಿ -577 515, ಹೊಸದರ್ಗ ತಾಲೂಕು ಚಿತ್ರದುರ್ಗ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು ಹಾಗೂ ಜು. 6 ರಿಂದ 8 ರವರೆಗೆ 3 ದಿನಗಳ ಸಂದರ್ಶನಕ್ಕೆ ಹಾಜರಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9448398144, 9482942394 ಗೆ ಸಂಪರ್ಕಿಸಿ ಎಂದು ಶಿವಕುಮಾರ ರಂಗಪ್ರಯೋಗ ಶಾಲೆ ತಿಳಿಸಿದೆ.
ತರಗತಿ ದಾಖಲಾತಿ : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯ ಮುಂಡಗೋಡ ತಾಲೂಕಿನ ಕರಗಿನಕೊಪ್ಪ, ಹಳಿಯಾಳ ತಾಲೂಕಿನ ಮದನಳ್ಳಿ ಹಾಗೂ ಶಿರಸಿ ತಾಲೂಕಿನ ಕಲ್ಲಿ ಕಾಲೇಜುಗಳಲ್ಲಿ ಪ್ರಥಮ ಪಿ.ಯು.ಸಿ. ತರಗತಿ ದಾಖಲಾತಿಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, 2ಬಿ, 3ಎ ವಿದ್ಯಾರ್ಥಿಗಳಿಂದ ಭೌತಿಕವಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಜೂ.12 ರೊಳಗಾಗಿ ಸಂಬಧಪಟ್ಟ ತಾಲೂಕಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯ ವಸತಿ ಶಾಲೆಯ ಪ್ರಾಂಶುಪಾಲರಿಗೆ ಅರ್ಜಿ ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment