ಹೊನ್ನಾವರ : ಅನಧೀಕೃತವಾಗಿ ಮೂರು ಕಂಟೇನರ್ ನಲ್ಲಿ ಸಾಗಿಸುತ್ತಿದ್ದ 12 ಗೋವುಗಳನ್ನು ಪೊಲೀಸರು ಕಾರ್ಯಾಚರಣೆಯ ವೇಳೆ ರಕ್ಷಿಸಿದ್ದಾರೆ.
ಅಧಿಕೃತವಾಗಿ ಯಾವುದೇ ಪಾಸ್ ಪರ್ಮಿಟ್ ಹೊಂದಿರದೇ ಗಾಳಿ ಬೆಳಕು ಇಲ್ಲದೇ ಹಿಂಸಾತ್ಮಕವಾಗಿ ವಧೆ ಮಾಡುವ ಉದ್ದೇಶದಿಂದ ಮೂರು ಕಂಟೇನರ್ ನಲ್ಲಿ ಮೂರು ಹೋರಿಗಳು ಹಾಗೂ 9 ಕೋಣವನ್ನು ಸಾಗಿಸುತ್ತಿದ್ದಾಗ ಪಿಎಸೈ ಮಹಾಂತೇಶ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿ ವಶಕ್ಕೆ ಪಡೆದಿದಾರೆ.
ಚಿತ್ರದುರ್ಗದ ಚಳ್ಳಕೆರೆಯ ಮಹಮ್ಮದ್ ಜಾಫರ್, ಹಾವೇರಿಯ ಹಾನಗಲ್ ಹನುಮಂತ ಬರ್ಮ ಗೌಡ ಹಾಗೂ ಸುರೇಶ ಕಟ್ಟಿಗೇರ ಎನ್ನುವವರನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬAಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment