ಭಟ್ಕಳ: ಮಂಗಳೂರಿನಿಂದ ಮುಂಬೈ ಕಡೆ ಹೊರಟ ಕಾರೊಂದು ಪಾದಚಾರಿ ಮಹಿಳೆ ರಸ್ತೆ ದಾಟುವ ವೇಳೆ ಢಿಕ್ಕಿ ಹೊಡೆದ ಪರಿಣಾಮ ಸ್ಥಳದ ಸಾವನ್ನಪ್ಪಿದ ಘಟನೆ ಮಾವಿನಕಟ್ಟೆ ಬೆಂಗ್ರೆ ಬಳಿ ನಡೆದಿದೆ.
ಮೃತ ಮಹಿಳೆ ಮಾಸ್ತಮ್ಮ ಕುಪ್ಪಯ ನಾಯ್ಕ (60) ಇಲ್ಲಿನ ಬೆಳಕೆ ಗೊರಟೆಯ ನಿವಾಸಿ ಎಂದು ತಿಳಿದು ಬಂದಿದೆ.
ಮಹಿಳೆಯು ತನ್ನ ಮಗಳ ಮನೆಗೆ ಭಟ್ಕಳದಿಂದ ಬೆಂಗ್ರೆಗೆ ತೆರಳಿದ್ದು ಈ ವೇಳೆ ಟೆಂಪೋ ಇಳಿದು ನಡೆದುಕೊಂಡು ಹೋಗುವಾಗ ಮಂಗಳೂರಿನಿಂದ ಮುಂಬೈ ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರು ಬಂದು ಬಡಿದಿದೆ.
ಕಾರು ರಭಸದಿಂದ ಬಂದು ಬಡಿದ ಪರಿಣಾಮ ಮಹಿಳೆಯು ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾಳೆ.
ಮೃತ ಮಹಿಳೆಯ ದೇಹವನ್ನು ಅಪಘಾತ ಗೊಳಿಸಿದ ಕಾರಿನಲ್ಲಿಯೇ ತಕ್ಷಣಕ್ಕೆ ಮಹಿಳೆಯನ್ನು ಶಿರಾಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಅಲ್ಲಿನ ವೈದ್ಯರು ಮಹಿಳೆಯನ್ನು ಪರೀಕ್ಷೆ ನಡೆಸಿ ಮೃತ ಪಟ್ಟಿರುವುದು ದ್ರಢಪಡಿಸಿದ್ದಾರೆ.
ಆಸ್ಪತ್ರೆಯ ಶವಾಗಾರದಲ್ಲಿ ಮ್ರತ ದೇಹವನ್ನು ಇರಿಸಲಾಗಿದ್ದು, ಬಳಿಕ ಸರಕಾರಿ ಆಸ್ಪತ್ರೆ ಭಟ್ಕಳಕ್ಕೆ ರವಾನಿಸಲಾಗಿದೆ. ಈ ಕುರಿತು ಮುರುಡೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Leave a Comment