ಸಿದ್ದಾಪುರ : ಎರಡು ಹೋರಿಗಳನ್ನು ಹಿಂಸಾತ್ಮಕವಾಗಿ ಯಾವುದೇ ಪರವಾನಿಗೆ ಇಲ್ಲದೇ ಸಾಗಿಸುತ್ತಿರುವಾಗ ಆರೋಪಿಯೊಂದಿಗೆ ವಾಹನ ಹಾಗೂ ಜಾನುವಾರುಗಳನ್ನು ಸ್ಥಳೀಯ ಠಾಣೆಯ ಪೊಲೀಸರು ಶುಕ್ರವಾರ ರಾತ್ರಿ ವಶಕ್ಕೆ ತೆಗೆದುಕೊಂಡಿದ್ದಾರೆ.
ತಾಲೂಕಿನ ಅವರಗುಪ್ಪಾದ ಚೇತನಕುಮಾರ ರವಿವೀರ ನಾಯ್ಕ ಅಕ್ರಮವಾಗಿ ಜಾನುವಾರುಗಳನ್ನು ಬೊಲೆರೋ ಪಿಕ್ ಅಪ್ ವಾಹನದಲ್ಲಿ ಸಾಗಾಟ ಮಾಡುತ್ತಿರುವಾಗ ಬಿಳಗಿ ಮಾರಿಕಾಂಬಾ ಸರ್ಕಲ್ ಹತ್ತಿರ ಪತ್ತೆಮಾಡಲಾಗಿದ್ದು ಬಿಳಗಿ ಹೊಸಮಂಜುವಿನ ಶ್ರೀ ಹರ್ಷ ಗಜಾನನ ನಾಯಕ ಅವರು ಈ ಕುರಿತು ಲಿಖಿತ ದೂರು ಸಲ್ಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪಿಎಸ್ ಐ ಮಲ್ಲಿಕಾರ್ಜುನಯ್ಯ ಕೊರಾಣಿ ಈ ಕುರಿತು ತನಿಖೆ ಕೈಗೊಂಡಿದ್ದಾರೆ.
Leave a Comment