ಹೊನ್ನಾವರ ; ಪಟ್ಟಣ ಬಂದರು ಹಾಗೂ ದುರ್ಗಾಕೇರಿಗೆ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿಯೇ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡು ವಾಹನ ಸವಾರರು ರಸ್ತೆಗಳಲ್ಲಿ ಸಂಚರಿಸಲು ಹರಸಾಹಸ ಪಡುವಂತಾಯಿತು.
ರಸ್ತೆ ಪಕ್ಕದ ಅಂಗಡಿಗೆ ಆಗಮಿಸುವ ಗ್ರಾಹಕರಿಗೆ,ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಕಿರಿಕಿರಿಯಂತಾಯಿತು.ರಸ್ತೆಯಲ್ಲಿ ಏಕಾಎಕಿ ತುಂಬಿದ ಕೆಸರಿನ ನೀರು ‘ಕಪ್ಪು ರಸ್ತೆಯನ್ನು ಕೆಂಪಾಗಿಸಿತು. ಶನಿವಾರ ಸಂತೆಯಾದ್ದರಿಂದ ಜನಸಂಚಾರ ಇತರ ದಿನಗಳಿಗಿಂತ ಜಾಸ್ತಿಯೇ ಇತ್ತು. ಕಾರ್,ಆಟೋ,ಬೈಕ್ ಸೇರಿದಂತೆ ಸಣ್ಣಪುಟ್ಟ ವಾಹನ ಸವಾರರು ಸಂಚರಿಸುವ ವೇಳೆ ಸಮಸ್ಯೆಯಾಯಿತು. ರಸ್ತೆ ಅಕ್ಕಪಕ್ಕ ಸಂಚರಿಸಿದ ಪಾದಚಾರಿಗಳು ಕೆಸರಿನ ರಾಡಿ ತಾಗುವ ಭಯದಲ್ಲೆ ನಡೆದರು.
Leave a Comment