ಹೊನ್ನಾವರ : ತಾಲೂಕಿನ ಗೇರುಸೊಪ್ಪದ ಅಡಿಗದ್ದೆಯ ರೇಣುಕಾ ಪುರಂದರ ನಾಯ್ಕ ಅವರ ಮನೆಯ ಮೇಲೆ ಗಾಳಿಮಳೆಗೆ ಬೃಹದಾಕಾರದ ಮರ ಬಿದ್ದು ಹಾನಿಯಾಗಿದೆ.
ಮರ ಬಿದ್ದು ಹಾನಿಯಾಗುವ ಜೊತೆಗೆ ವಿಪರೀತ ಮಳೆ ಸುರಿದ ಪರಿಣಾಮ ಮನೆಯ ಗೋಡೆ ಕುಸಿದಿದೆ. ಅವಘಡದಲ್ಲಿ ಮನೆಯ ಮೇಲ್ಛಾವಣಿ, ಅಡುಗೆ ಕೋಣೆ ಹೆಚ್ಚು ಹಾನಿಗೊಂಡಿದೆ. ಮರ ಬಿದ್ದ ಪರಿಣಾಮ ಮನೆಯ ಗೊಡೆಗಳು ಕುಸಿದಿದೆ. ಮನೆಯ ಮೇಲ್ಛಾವಣಿಗೆ ಹಾಕಲಾದ ಸಿಮೆಂಟ್ ಶೀಟ್, ರೀಪು, ಪಕಾಸಿಗಳು ಒಡೆದು ಚೂರಾಗಿ ನೆಲಕ್ಕೆ ಬಿದ್ದಿದೆ. ಮನೆ ಒಳಗಿನ ಪರಿಕರಗಳಿಗೆ ಹಾನಿಯಾಗಿದೆ. ಮನೆ ಒಳಗೆ ಮಳೆಯ ನೀರು ಸೇರಿದ ಪರಿಣಾಮ ಧವಸ ಧಾನ್ಯದ ಚೀಲಗಳು ನೀರು ಸಿಕ್ಕಿ ಹಾನಿಯಾಗಿದೆ ಎನ್ನಲಾಗಿದೆ.
ಅದೃಷ್ಟವಷಾತ್ ಮನೆಯಲ್ಲಿ ಯಾರು ಇರದ ಕಾರಣ ಜೀವ ಹಾನಿ ಅಥವಾ ಇನ್ನಿತರ ದುರ್ಘಟನೆ ನಡೆಯುವುದು ತಪ್ಪಿದಂತಾಗಿದೆ. ಅಂದಾಜು 1,19,500 ರಷ್ಟು ಹಾನಿಯಾಗಿದೆ ಎನ್ನಲಾಗಿದೆ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರು ಭೇಟಿ ನೀಡಿ ಪರಿಶೀಲಿಸಿ ಹಾನಿ ವಿವರ ಪಡೆದಿದ್ದಾರೆ.
ಗೇರುಸೊಪ್ಪಾ ಅಡಿಗದ್ದೆಯ ನಿವಾಸಿ ರೇಣುಕಾ ಪುರಂದರ ನಾಯ್ಕ ಅವರ ಮಗ 21 ವರ್ಷದ ಯುವಕ ವಿನಾಯಕ ಪುರಂದರ ನಾಯ್ಕರವರು ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಿಡ್ನಿ ಜೋಡಣೆಯ ಶಸ್ತç ಚಿಕಿತ್ಸೆ ನಡೆದಿದೆ. ಈ ಕಾರಣದಿಂದ ಬಡಕುಟುಂಬ ಆಸ್ಪತ್ರೆಯಲ್ಲಿರುವಂತಾಗಿದೆ. ಇದರಿಂದ ಜೀವಹಾನಿಯಾಗುವುದು ತಪ್ಪಿದಂತಾಗಿದೆ.
Leave a Comment