ಕಾರವಾರ : ಜಿಲ್ಲಾ ಗೃಹರಕ್ಷಕದಳದ ವತಿಯಿಂದ ಜಿಲ್ಲೆಯ ವಿವಿಧ ಘಟಕಗಳಲ್ಲಿ ಖಾಲಿ ಇರುವ 234 ಗೃಹರಕ್ಷಕರ ಹುದ್ದೆ ನೇಮಕ ಮಾಡಿಕೊಳ್ಳಲು ಜೂ. 17 ರಂದು ಬೆಳಗ್ಗೆ 9 ಗಂಟೆಗೆ ಪೊಲೀಸ್ ಕವಾಯತು ಮೈದಾನದಲ್ಲಿ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಆಸಕ್ತ 20 ರಿಂದ 45 ವರ್ಷದೊಳಗಿನ ಆಯಾ ಘಟಕದ ವ್ಯಾಪ್ತಿಯಲ್ಲಿ ವಾಸವಿರುವ ಅಭ್ಯರ್ಥಿಗಳು ಆಧಾರ ಕಾರ್ಡ್, ಎಸ್ ಎಸ್ ಎಲ್ ಸಿ ಅಂಕಪಟ್ಟಿ, ಟಿಸಿ, ವೈದ್ಯಕೀಯ ಪ್ರಮಾಣ ಪತ್ರ ಮತ್ತು 2 ಭಾವಚಿತ್ರ ಸಹಿತ ಕಾರವಾರದ ಕಾಜುಬಾಗದಲ್ಲಿರುವ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬೆಳಗ್ಗೆ 9 ಗಂಟೆಗೆ ಹಾಜರಿರಬೇಕು.
ಗೃಹರಕ್ಷಕ ಹುದ್ದೆ ಖಾಲಿ ಇರುವ ಘಟಕಗಳು : ಕಾರವಾರ – 21 (ಪುರುಷ – 19, ಮಹಿಳಾ -02) ಚೆಂಡಿಯಾ – 14 (ಪುರುಷ – 08, ಮಹಿಳಾ – 06) ಯಲ್ಲಾಪುರ – 15 (ಪುರುಷ 09, ಮಹಿಳಾ – 06), ಅಂಕೋಲಾ – 11 (ಪುರುಷ -09, ಮಹಿಳಾ 02), ಕುಮಟಾ – 06 (ಮಹಿಳಾ-06,), ಹೊನ್ನಾವರ – 16 (ಪುರುಷ – 16), ಭಟ್ಕಳ – 29 ಪುರುಷ -29), ಸಿದ್ಧಾಪುರ – 14 (ಪುರುಷ – 14), ಶಿರಸಿ – 20 ಪುರುಷ-14, ಮಹಿಳಾ – 06), ಮುಂಡಗೋಡ – 26 (ಪುರುಷ – 20, ಮಹಿಳಾ – 06) ಯಲ್ಲಾಪುರ – 26 (ಪುರುಷ – 21, ಮಹಿಳಾ 05), ಹಳಿಯಾಳ – 11 (ಪುರುಷ – 02, ಮಹಿಳಾ 09), ದಾಂಡೇಲಿ-13(ಪುರುಷ – 09 ಮಹಿಳಾ – 04 ಮತ್ತು ಜೋಯಿಡಾ – 12 (ಪುರುಷ – 12), ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಗೃಹರಕ್ಷಕದಳ ಕಚೇರಿ ದೂರವಾಣಿ ಸಂಖ್ಯೆ : 08382 – 226361 ಗೆ ಸಂಪರ್ಕಿಸಬಹುದೆAದು ಜಿಲ್ಲಾ ಗೃಹರಕ್ಷಕದಳ ಸಮಾದೇಷ್ಟರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment