ಧಾರವಾಡ : ಸಾಲ ಮರುಪಾವತಿಸಲು ವಿಫಲವಾದರೆ ಅವರ ಚಿತ್ರವನ್ನು ಅಶ್ಲೀಲ ಚಿತ್ರಗಳನ್ನಾಗಿ ಮಾರ್ಪಾಡು ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಸಾರ ಮಾಡುವುದಾಗಿ ಬೆದರಿಸಿ ಸಂತ್ರಸ್ತರಿಂದ ಹಣ ವಸೂಲಿ ಮಾಡುತ್ತಿದ್ದ ಐವರು “ಲೋನ್ ಆ್ಯಪ್’ ಆಪರೇಟರ್‌ಗಳು ಮತ್ತು ಏಜೆಂಟ್ ಗ್ಯಾಂಗ್‌ನ್ನು ಧಾರವಾಡದಲ್ಲಿ ಮಹಾರಾಷ್ಟ್ರ, ಸೈಬರ್ ಸೆಲ್ ಸೋಮವಾರ ಬಂಧಿಸಿದೆ.
ಸುಹೇಲ್ ನಾಸಿರುದ್ದೀನ್ ಸಯ್ಯದ್(24), ಅಹಮದ್ ರಜಾ ಜಾಹಿದ್ ಹುಸೇನ್ (26), ಸಯ್ಯದ್ ಅಥರ್(24), ಕೈಫ್ ಕಾದರಿ(22) ಮತ್ತು ಮುಷ್ಠಿಯಾಜ್ ಬಾಷಾ ಪೀರಜಾದೆ(21) ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದ್ದು, ಅವರಲ್ಲಿ ಒಬ್ಬ ಎಂಬಿಎ ಪದವೀಧರ ಎಂದು ಹೇಳಲಾಗಿದೆ.
ಮುಂಬೈನ ಉಪನಗರ ಮುಲುಂಡ್ ನ ವ್ಯಕ್ತಿಯೊಬ್ಬರು 11 ಸಾವಿರ ರೂ. ಸಾಲ ಪಡೆದಿದ್ದರು. ನಂತರ ಮರಳಿಸಲು ತಡವಾಗಿತ್ತು. ಲೋನ್ ಆಪ್ ಏಜೆಂಟರುಗಳಿಂದ ಕಿರುಕುಳದ ಕುರಿತು ಸಂತ್ರಸ್ತರು ದೂರು ದಾಖಲಿಸಿದ್ದರು. ಅಲ್ಲದೇ ದೂರಿನಲ್ಲಿ ತಾವು ಪಡೆದ ಸಾಲಕ್ಕಿಂತ96 ಸಾವಿರರೂ.ಹಣಭರಿಸಿರುವುದಾಗಿ ತಿಳಿಸಿದ್ದರು.
ಮುಂಬೈನ ವಿಶೇಷ ತಂಡ ನಡೆಸಿದ ತನಿಖೆಯಲ್ಲಿ ಸೈಬರ್ ಪೊಲೀಸರು ಸಂತ್ರಸ್ತನಿಗೆ ಬೆದರಿಕೆ ಹಾಕಲು ಬಳಸಿದ ಫೋನ್ ಸಂಖ್ಯೆ ಪತ್ತೆಹಚ್ಚಿದ್ದಾರೆ. ನಂತರ ಪೊಲೀಸರು ಧಾರವಾಡಕ್ಕೆ ಆಗಮಿಸಿ ಎಲ್ಲ ಐವರನ್ನು ಬಂಧಿಸಿದ್ದಾರೆ. ಆರೋಪಿಗಳು ಹ್ಯಾಂಡಿ ಲೋನ್ ಮತ್ತು ಇತರ ಅರ್ಜಿ ಬಳಸಿಕೊಂಡು ಸಂತ್ರಸ್ತರಿಂದ ಹಣ ಲೂಟಿ ಮಾಡುತಿದರು ಎಂದು ಮೂಲಗಳು ತಿಳಿಸಿವೆ.
Leave a Comment