ಹೊನ್ನಾವರ: ಅಂಗನವಾಡಿ ಗೋಡೆಯ ಸಿಮೆಂಟ್ ಪ್ಲಾಸ್ಟರ್ ಕುಸಿದು ಕೂದಲೆಳೆ ಅಂತರದಲ್ಲಿ ಅಂಗನವಾಡಿ ಕಾರ್ಯಕರ್ತೆ ಪಾರಾದ ಘಟನೆ ತಾಲೂಕಿನ ಕಡ್ನೀರಿನಲ್ಲಿ ನಡೆದಿದೆ.
ನಾಲ್ಕು ವರ್ಷಗಳಿಂದ ಶಿಥಿಲಾವಸ್ಥೆಯ ಲ್ಲಿದ್ದ ಈ ಕಡ್ನೀರು ಅಂಗನವಾಡಿ ಕೇಂದ್ರವು ಜನಪ್ರತಿನಿಧಿಗಳು, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಅಂಗನವಾಡಿಯ ಗೋಡೆ ಬಿರುಕು ಬಿಟ್ಟರೂ ಅಧಿಕಾರಿಗಳು ಗಮನ ಹರಿಸಿರಲಿಲ್ಲ.
ಗೋಡೆಯಲ್ಲಿ ಬಿರುಕು ಬಿಟ್ಟಿರುವ ಕಾರಣ ಅಂಗನವಾಡಿಯ ಸಮೀಪದ ಶಾಲಾ ರಂಗಮಂದಿರದಲ್ಲಿ ಪುಟಾಣಿಗಳಿಗೆ ಪಾಠ ಮಾಡಲಾಗುತ್ತಿತ್ತು. ಆದರೆ ಮಂಗಳವಾರ ಇದ್ದಕ್ಕಿದ್ದಂತೆ ಅಂಗನವಾಡಿಯ ಗೋಡೆ ಕುಸಿದಿದ್ದು, ಘಟನೆಯಿಂದ ಅಂಗನವಾಡಿ ಕೇಂದ್ರದೊಳಗೆ ಕೆಲಸ ಮಾಡುತ್ತಿದ್ದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ, ಆಶಾ ಕಾರ್ಯಕರ್ತೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಇದರಿ೦ದಾಗಿ ಮಕ್ಕಳು ಬೆಚ್ಚಿಬಿದ್ದಿದ್ದು, ಪಾಲಕರು ಕೂಡ ಭಯಭೀತರಾಗಿದ್ದಾರೆ. ಈ ಘಟನೆಯಿ೦ದಾಗಿ ಅಂಗನವಾಡಿಗೆ ಮಕ್ಕಳನ್ನು ಕಳುಹಿಸಲು ಪಾಲಕರು ನಿರಾಕರಿಸುತ್ತಿದ್ದಾರೆ.
Leave a Comment