ಕಾರವಾರ: ನಾಡಿಗೆ ಬಂದ ಕಡವೆಯೊಂದು ಮರಳಿ ಕಾಡಿಗೆ ತೆರಳುವ ಸಂದರ್ಭದಲ್ಲಿ ಗೇಟೊಂದಕ್ಕೆ ಬಡಿದು ಮೃತಪಟ್ಟ ಘಟನೆ ತಾಲೂಕಿನ ಶಿರವಾಡ ಗ್ರಾಪಂ ವ್ಯಾಪ್ತಿಯ ಶೇಜವಾಡದಲ್ಲಿ ನಡೆದಿದೆ.
ಶೇಜವಾಡದ ವರುಣಕೆರೆಯ ಬಳಿ ರಾಜ್ಯ ಹೆದ್ದಾರಿ ಬದಿಯಲ್ಲಿ ಈ ಘಟನೆ ನಡೆದಿದೆ. ಸಮೀಪದಲ್ಲೇ ಇರುವ ಕಾಡಿನಿಂದ ಆಹಾರವನ್ನು ಅರಸುತ್ತ ಈ ಕಡವೆಯು ಹೆದ್ದಾರಿ ದಾಟಿ ಗದ್ದೆ ಪ್ರದೇಶಕ್ಕೆ ಬಂದಿದ್ದು ಬಳಿಕ ನಾಯಿಗಳು ಅಟ್ಟಿಸಿಕೊಂಡು ಬಂದಿರುವ ಸಾದ್ಯತೆ ಇದ್ದು ಈ ವೇಳೆ ವೇಗವಾಗಿ ಓಡಿದ ಕಡವೆಯು ಅಲ್ಲಿಯೇ ಇದ್ದ ಕಂಪೌಂಡ್ ನ ಮುಚ್ಚಿದ ಗೇಟ್ ಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ವಿಲ ವಿಲ ಒದ್ದಾಡಿ ಪ್ರಾಣ ಬಿಟ್ಟಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಈ ವೇಳೆ ಸ್ಥಳೀಯರು ನೀರು ಹಾಕಿ ಉಪಚರಿಸಿದರಾದರೂ ಬದುಕುಳಿಯಲಿಲ್ಲ. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಪಂಚನಾಮೆ ನಡೆಸಿ ಬಳಿಕ ಪಶು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ
Leave a Comment