ಕಾಸರಗೋಡು : ವಿದೇಶದಲ್ಲಿ ಮನೆ ಕೆಲಸಕ್ಕಾಗಿ ಕಾಸರಗೋಡು ಜಿಲ್ಲೆಯ ಯುವತಿಯರನ್ನು ಕರೆದೊಯ್ದು, ಬಳಿಕ ಅವರನ್ನು ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್‌ಗೆ ಹಸ್ತಾಂತರಿಸುತ್ತಿರುವ ಬಗ್ಗೆ ರಾಷ್ಟಿçÃಯ ತನಿಖಾ ದಳ (ಎನ್.ಐ.ಎ) ಕೈ ಮಾಹಿತಿ ಲಭಿಸಿದ್ದು, ತನಿಖೆ ಆರಂಭಿಸಿದೆ.
ಗಲ್ಫ್ ರಾಷ್ಟç ಕೇಂದ್ರೀಕರಿಸಿ ಯುವತಿಯರನ್ನು ಮನೆಕೆಲಸಗಳಿಗೆ ರವಾನಿಸಲು ಕಣ್ಣೂರು ಜಿಲ್ಲೆಯ ತಳಿಪರಂಬ ನಿವಾಸಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಎನ್ ಐವಿಗೆ ಮಾಹಿತಿ ಲಭಿಸಿದ್ದು,
ಈತನ ಪತ್ತೆಗೆ ಬಲೆ ಬೀಸಿದೆ. ಎರ್ನಾಕುಳಂನ ನೇಮಕಾತಿ ಸಂಸ್ಥೆಯೊAದು ಮಾವೇಲಿಕ್ಕರ ನಿವಾಸಿ ಯುವತಿಯನ್ನು ಕುವೈತ್ ಗೆ ಕಳುಹಿಸಿದ್ದು, ಅಲ್ಲಿಂದ ಆಕೆಯನ್ನು ಸಿರಿಯಾಕ್ಕೆ ರವಾನಿಸೆದೆ. ತಂಡದ ವಶದಲ್ಲಿದ್ದ ಈ ಯುವತಿ ತಪ್ಪಿಸಿಕೊಂಡು ಊರಿಗೆ ಬಂದಿದ್ದು, ತನಿಖಾ ತಂಡಕ್ಕೆ ಮಾಹಿತಿ ನೀಡಿದ್ದಾಳೆ.
ವಿದೇಶದಲ್ಲಿ ಮನೆಕೆಲಸಕ್ಕೆ ಯುವತಿಯರು ಬೇಕಾಗಿದ್ದು, ೫೦ ಸಾವಿರ ರೂ ವರೆಗೆ ವೇತನ ನೀಡುವುದಾಗಿ ಜಾಹೀರಾತು ನೀಡುತ್ತಾರೆ. ಗಲ್ಫ್ ರಾಷ್ಟçಕ್ಕೆ ಯುವತಿಯರು ತಲುಪುತ್ತಿದ್ದಂತೆ ಅವರನ್ನು ೧೦ ಲಕ್ಷ ರೂ.ಗೂ ಹೆಚ್ಚಿನ ಮೊತ್ತಕ್ಕೆ ಸಿರಿಯಾದ ಐಸಿಸ್ ಕೇಂದ್ರಕ್ಕೆ ಮಾರಾಟ ಮಾಡಲಾಗುತ್ತಿದೆ. ಎಂದು ಯುವತಿ ತಿಳಿಸಿದ್ದಾಳೆ.
ಯುವತಿ ನೀಡಿದ ಮಾಹಿತಿ ಅನ್ವಯ ದೂರು ದಾಖಲಾಗಿದ್ದರೂ ಪ್ರಕರಣವನ್ನು ಎನ್ ಐಎಗೆ ವಹಿಸದಿರುವುದರಿಂದ ತನಿಖೆ ವಿಳಂಬವಾಗುತ್ತಿದೆ. ಈ ಕೃತ್ಯದಲ್ಲಿ ತಳಿಪರಂಬ ನಿವಾಸಿ ಮಜೀದ್ ಎಂಬಾತನ ಕೈವಾಡವಿರುವ ಬಗ್ಗೆ ಗುಮಾನಿ ವ್ಯಕ್ತವಾಗಿದ್ದು, ಆತನ ಪತ್ತೆಗೆ ತನಿಖಾ ಎಜೆನ್ಸಿ ಕ್ರಮ ಕೈಗೊಂಡಿದೆ.
Leave a Comment