ಪಿ.ಡಬ್ಲು ಡಿ ಇಂಜಿನಿಯರ್ ರಾಜೀವ್ ನಾಯ್ಕ ಹಾಗೂ ಜಿಲ್ಲಾ ನೋಂದಣಾಧಿಕಾರಿ ಶ್ರೀಧರ್ ಮನೆಯ ಮೇಲೆ.ದಾಳಿ
ಕಾರವಾರ: ನಗರದ ಎಂ.ಜಿ ರಸ್ತೆಯಲ್ಲಿರುವ ಬೃಂದಾವನ ಅಪಾರ್ಟ್ ಮೆಂಟ್ ಹಾಗೂ ಹಬ್ಬುವಾಡದ ಮನೆಯ ಮೇಲೆ ಎಸಿಬಿ ಅಧಿಕಾರಿಗಳ ತಂಡಗಳ ತಂಡದಿಂದ ದಾಳಿ ನಡೆಸಲಾಗಿದೆ
ಕಾರವಾರದ ಎಸಿಬಿ ಡಿವೈಎಸ್ ಪಿ ಪ್ರಕಾಶ್ ನೇತ್ರತ್ವದ ತಂಡ ಹಾಗೂ ಹುಬ್ಬಳ್ಳಿಯ ಎಸಿಬಿ ಅಧಿಕಾರಿಗಳು ಪ್ರತ್ಯೇಕವಾಗಿ ಎರಡು ತಂಡಗಳ ಮೂಲಕ ದಾಳಿ ನಡೆಸಿದೆ.
ಕುಮಟಾ ಮೂಲದ ಪಿ.ಡಬ್ಲು ಡಿ ಇಂಜಿನಿಯರ್ ರಾಜೀವ್ ನಾಯ್ಕ ಹಾಗೂ ಜಿಲ್ಲಾ ನೋಂದಣಾಧಿಕಾರಿ ಶ್ರೀಧರ್ ಎಸಿಬಿ ದಾಳಿಗೆ ಒಳಗಾದ ಅಧಿಕಾರಿಗಳಾಗಿದ್ದಾರೆ. ಕಾರವಾರ ನಗರದ ಎಂ.ಜಿ ರಸ್ತೆಯಲ್ಲಿರುವ ಬೃಂದಾವನ ಅಪಾರ್ಟ್ ಮೆಂಟ್, ಹಬ್ಬುವಾಡದ ಮನೆಯ ಮೇಲೆ ಎರಡು ತಂಡಗಳು ದಾಳಿ ನಡೆಸಿದ್ದು ಆಧಾಯಕ್ಕಿಂತ ಹೆಚ್ಚಿನ ಸಂಪತ್ತು ಹೊಂದಿದ ಹಿನ್ನಲೆಯಲ್ಲಿ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ
Leave a Comment