ಕಾರವಾರ: ಜಿಲ್ಲೆಯ 29 ಗ್ರಾಮ ಪಂಚಾಯತಗಳಲ್ಲಿ ಗ್ರಾಮ ಒನ್ ಕೇಂದ್ರ ಆರಂಭಿಸಲು ಫ್ರಾಂಚೈಸಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯಲ್ಲಿ 227 ಗ್ರಾಮ ಪಂಚಾಯತಗಳಿದ್ದು ಅದರಲ್ಲಿ 198 ಪಂಚಾಯತಗಳಲ್ಲಿ ಗ್ರಾಮ ಒನ್ ಕೇಂದ್ರ ಅನುಷ್ಠಾನಗೊಂಡು ಕಾರ್ಯಾರಂಭಿಸಿವೆ.
ಉಳಿದ ಅಂಕೋಲಾ ತಾಲೂಕಿನ ಮೊಗಟಾ, ಡೋಂಗ್ರಿ, ಅವರ್ಸಾ, ಭಟ್ಕಳ ತಾಲೂಕಿನ ಬೆಳೆ, ಹೊನ್ನಾವರ ತಾಲೂಕಿನ ಕರ್ಕಿ, ಕಾರವಾರ ತಾಲೂಕಿನ ವೈಲವಾಡಾ, ಸಿದ್ದಾಪುರ ತಾಲೂಕಿನ ಕಾವಂಚೂರ, ತಂಡಾಗುಂಡಿ, ಮನೆಮನೆ, ಶಿರಸಿ ತಾಲೂಕಿನ ಶಿವಳ್ಳಿ, ಸಾಲ್ಕಣಿ, ಜಾನ್ಮನೆ, ಗುಡ್ಡಾಪುರ, ಇಟಗುಳಿ, ಸುಗಾವಿ, ಮೇಲಿನ ಓಣಿಕೇರಿ, ಯಡಳ್ಳಿ, ಸುಪಾ ತಾಲೂಕಿನ ಗಾಂಗೋಡಾ, ಬಜಾರಕುಣಂಗ, ನಾಗೋಡಾ, ಉಳವಿ ಶಿಂಗರಗಾಂವ್, ಯಲ್ಲಾಪುರ ತಾಲೂಕಿನ ಕಣ್ಣಿಗೇರಿ, ಹಿತ್ತಳ್ಳಿ, ದೇಹಳ್ಳಿ, ಹಾಸಣಗಿ, ವಜ್ರಳ್ಳಿ ನಂದೊಳ್ಳಿ, ಮಂಚಿಕೇರಿ (ಕಂಪ್ಲಿ) ಗಳಲ್ಲಿ ಗ್ರಾಮ್ ಒನ್ ಆರಂಭಿಸಲು ಅರ್ಜಿ ಆಹ್ವಾನಿಸಲಾಗಿದ್ದು,
ಆಸಕ್ತರು ಜೂ. 22 ರೊಳಗಾಗಿ https://www.karnatakaone. gov.in/public/Gramonefranchisee Term
ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment