ಜೈಲಿನಲ್ಲಿರುವ ಮಗನಿಗೆ ಆತನ ತಾಯಿಯೇ ಮಾದಕ ವಸ್ತು ನೀಡಲು ಹೋಗಿ ಸಿಕ್ಕಿಬಿದ್ದಿದ್ದಾಳೆ. ಸುಲಿಗೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ಮಗ ಮಹಮದ್ ಬಿಲಾಲ್ ನಿಗೆ ಆತನ ತಾಯಿ ಪರ್ವೀನ್ ತಾಜ್ ಊಟದ ಡಬ್ಬಿಯಲ್ಲಿ ಮಾದಕ ಹ್ಯಾಶಿಷ್ ನೋಡಿ ಆಕೆಯನ್ನು ಕೂಡಲೇ ವಶಕ್ಕೆ ಪಡೆದಿದ್ದಾರೆ.
ಶಿಕಾರಿ ಪಾಳ್ಯದ ಮಹಮದ್ ಬಿಲಾಲ್ ಮಾದಕ ವ್ಯಸನಿಯಾಗಿದ್ದ. ಬರೋಬ್ಬರಿ ೧೧ ಪ್ರಕರಣದಲ್ಲಿ ಈತ ಜೈಲು ಸೇರಿದ್ದ. ಜೈಲಿನಲ್ಲಿದ್ದುಕೊಂಡೇ ಮಾದಕ ವಸ್ತು ಸೇವನೆ ಮಾಡುತ್ತಿದ್ದ. ಇತ್ತೀಚಿಗೆ ತನಗೆ ಡ್ರಗ್ಸ್ ಬೇಕು ಎಂದು ತನ್ನ ತಾಯಿಗೆ ತಿಳಿಸಿದ ಹಿನ್ನಲೆಯಲ್ಲಿ ಪರಪ್ಪನ ಅಗ್ರಹಾರಕ್ಕೆ ಬಂದ ಪರ್ವೀನ್ ಜೈಲಿನ ಸಂದರ್ಶಕರ ಕೊಠಡಿಯಲ್ಲಿ ಕುಳಿತ್ತದ್ದಾರೆ.
ಅಲ್ಲಿಗೆ ಬಂದ ಅಧಿಕಾರಿಗಳು ಮಗನಿಗೆ ಊಟ ತAದಿದ್ದೇನೆ ಎಂದು ಲಂಚ್ ಬಾಕ್ಸ್ ತೋರಿಸಿದ್ದಾಳೆ. ನಂತರ ಪೊಲೀಸರು ಊಟದ ಬಾಕ್ಸ್ ಪರಿಶೀಲನೆ ನಡೆಸಿದಾಗ ಅದರಲ್ಲಿ ಹ್ಯಾಶಿಷ್ ಕಂಡು ಕೂಡಲೇ ಆಕೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
Leave a Comment