ಶಿರಸಿ : ಕೇಬಲ್ ಕಳ್ಳತನ ಪ್ರಕರಣಕ್ಕೆ ಸಂಬಧಿಸಿದAತೆ ತಾಲೂಕಿನ ಬನವಾಸಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಂತರ್ ಜಿಲ್ಲಾ ಕೇಬಲ್ ಕಳ್ಳರನ್ನ ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆಯ ಸೋಮಪ್ಪ (29), ಶಿವರಾಜ (22), ಹಾಗೂ ಬ್ಯಾಡಗಿ ತಾಲೂಕಿನ ಸೈಯದ್ ಫರ್ಮಾನ (27) ಬಂಧಿತ ಆರೋಪಿಗಳಾಗಿದ್ದಾರೆ. ಜೂ. 16 ರಂದು ಬನವಾಸಿ ಸಮೀಪದ ಮೊಗವಳ್ಳಿ ಗ್ರಾಮದ ಸದಾನಂದ ಎನ್ನುವರು ನನ್ನ ಜಮೀನಿಗೆ ವರದಾ ನದಿಯಿಂದ ಮೋಟಾರ್ ಮೂಲಕ ನೀರನ್ನ ಉಪಯೋಗಿಸಿಕೊಳ್ಳುತ್ತಿದ್ದು ಯಾರೋ ಕಳ್ಳರು 250 ಅಡಿ ಉದ್ದದ ಮೋಟಾರ್ ಗೆ ಅಳವಡಿಸಿದ್ದ ಕೇಬಲನ್ನ ಕದ್ದಿದ್ದಾರೆ ಎಂದು ದೂರನ್ನ ನೀಡಿದ್ದನು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಖೆ ನಡೆಸಿ ಆರೋಪಿಗಳನ್ನ ಪತ್ತೆಹಚ್ಚಿದ್ದು ಕೃತ್ಯಕ್ಕೆ ಬಳಸಿದ ಎಡರು ಬೈಕ್ ಹಾಗೂ 250 ಅಡಿ ಉದ್ದದ ಕೇಬಲನ್ನ ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿತರು ಇದೇ ರೀತಿ ಸುಮಾರು 3 ಪ್ರಕರಣದಲ್ಲಿ ಕೇಬಲ ಕದ್ದಿರುವ ಪ್ರಕರಣ ಸಹ ತನಿಖೆಯಿಂದ ಬೆಳಕಿಗೆ ಬಂದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮಾನಾ ಪನ್ನೇಕರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದ್ರಿನಾಥ್, ಶಿರಸಿ ಡಿ.ವೈ.ಎಸ್.ಪಿ ರವಿ ನಾಯ್ಕ ಮಾಗದರ್ಶನದಲ್ಲಿ ಶಿರಸಿ ಸಿ.ಪಿ.ಐ ರಾಮಚಂದ್ರ ನಾಯಕ್, ಬನವಾಸಿ ಪಿ.ಎಸ್.ಐ ಹನುಮಂತ ಬಿರಾದಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
Leave a Comment