ಕಾರವಾರ : ಉತ್ಪಾದನೆ ಮತ್ತು ಸೇವಾ ಚಟುವಟಿಕೆಗಳಲ್ಲಿ ತೊಡಗಿರುವ ಉದ್ಯಮಗಳಿಗೆ ಭಾರತ ಸರ್ಕಾರದ ಸೂಕ್ಷö್ಮ, ಸಣ್ಣ ಮತ್ತು ಮಧ್ಯಮ ಮಂತ್ರಾಲಯದ ಉದ್ಯಮ ನೋಂದಣಿ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿದೆ.
ಆನ್ ಲೈನ್ ಮೂಲಕ ಇ-ಪ್ರಮಾಣಪತ್ರವನ್ನು www.udyam registration.gov.in ನಲ್ಲಿ ಉಚಿತವಾಗಿ ಪಡೆದುಕೊಳ್ಳಬಹುದು. ಈಗಾಗಲೇ ಕೈಗಾರಿಕೆ ಇಲಾಖೆಯಿಂದ ಐಇಎಂ – 2 ಪ್ರಮಾಣ ಪತ್ರ, ಉದ್ಯೋಗ ಆಧಾರ ಪ್ರಮಾಣ ಪತ್ರ ಪಡೆದಿರುವ ಘಟಕಗಳು ಸಹ ಈ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿದೆ.
ಜಿಲ್ಲೆಯ ಎಲ್ಲಾ ಕೈಗಾರಿಕೆಗಳಿಗೆ ಸದರಿ ನೋಂದಣಿ ಪ್ರಕ್ರಿಯೆ ಬಗ್ಗೆ ಅರಿವು ಮೂಡಿಸಲು ಮತ್ತು ಈ ಪ್ರಮಾಣ ಪತ್ರ ಪಡೆಯಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಜಿಲ್ಲಾಕೈಗಾರಿಕಾಕೇಂದ್ರ, ಶಿರವಾಡ, ಕಾರವಾರದ ಕಛೇರಿಯಲ್ಲಿ ಉದ್ಯಮಿ ನೋಂದಣಿ ಸಪ್ತಾಹವನ್ನು ಜೂನ್ 27 ರವರೆಗೆ ಪ್ರತಿದಿನ ಮಧ್ಯಾಹ್ನ 3 ರಿಂದ 5.30 ರವರೆಗೆ ಹಮ್ಮಿಕೊಳ್ಳಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ : 08382 – 282 302 ಅಥವಾ
[email protected] ಗೆ ಸಂಪರ್ಕಿಸಬಹುದಾಗಿದೆ ಎಂದು ಕಾರವಾರ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment