ಕಾರವಾರ: ಯೋಜನಾ ಉದ್ಯೋಗ ವಿನಿಮಯ ಕಚೇರಿ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ಬೆಂಗಳೂರಿನ ಟಯೋಟಾ ಕಿರ್ಲೋಸ್ಕರ್ ಮೋಟಾರ್ ವತಿಯಿಂದ ಜೂ. 22ರಂದು ಐಟಿಐ ತೇರ್ಗಡೆಯಾದ ಅಭ್ಯರ್ಥಿಗಳಿಗೆ 1 ವರ್ಷದ ಅಪ್ರೆಂಟಿಸ್‌ಗಾಗಿ ಅಪ್ರೆಂಟಿಸ್ ಮೇಳ ಆಯೋಜಿಸಲಾಗಿದೆ.
ಆಸಕ್ತ 18ರಿಂದ 25 ವರ್ಷದೊಳಗಿನ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಜೂ. 22ರಂದು ಬಾಡದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಮ್ಮಿಕೊಂಡಿರುವ ಮೇಳದಲ್ಲಿ ಭಾಗವಹಿಸಬಹುದಾಗಿದೆ. 10 ಮತ್ತು 12 ನೇ ತರಗತಿ ಪಾಸಾದವರಿಗಾಗಿ 2 ವರ್ಷದ ಆಟೊಮೊಬೈಲ್ ಅಸೆಂಬ್ಲಿ, ಆಟೋಮೊಬೈಲ್ ಪೇಂಟ್ಸ್ ಹಾಗೂ ಆಟೊಮೊಬೈಲ್ ವೆಲ್ಡ್ ಕೋರ್ಸ್ ಪಡೆಯಲು ಅವಕಾಶವಿದ್ದು ಆಸಕ್ತರು ತಮ್ಮ ವಿದ್ಯಾರ್ಹತೆ ದಾಖಲೆಗಳೊಂದಿಗೆ ಬಾಡ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08382-226386, 8310044796, 9743360656 ಗೆ ಸಂಪರ್ಕಿಸಬಹುದಾಗಿದೆ ಎಂದು ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment