ಭಟ್ಕಳ: ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವಂತೆ ಆಗ್ರಹಿಸಿ ಮೊಗೇರ ಸಮಾಜದ ಧರಣಿ ಮುಂದುವರೆದಿದ್ದು ಇದರ ಮುಂದುವರಿದ ಹೋರಾಟವಾಗಿ ಮೊಗೇರ ಸಮಾಜದ ಪ್ರೌಡಶಾಲಾ- ಪದವಿ ಕಾಲೇಜು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತರಗತಿ ಗೈರಾಗಿ ಬ್ರಹತ್ ಮೆರವಣಿಗೆ ಮೂಲಕ ಸಾಗಿ ಬಂದು ತಮ್ಮ ಶಾಲಾ ಕಾಲೇಜು ವ್ಯಾಸಂಗಕ್ಕೆ ಅವಶ್ಯವಿರುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಮುಂದುವರಿಸಬೇಕೆಂದು ಆಗ್ರಹಿಸಿ ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಳೆದ ೧೪ ವರ್ಷಗಳಿಂದ ಭಟ್ಕಳ ತಾಲೂಕಿನ ಮೊಗೇರ ಸಮುದಾಯ ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿದೆ. ಉಚ್ಚನ್ಯಾಯಲಯ, ಕೇಂದ್ರ ಪರಿಶಿಷ್ಟ ಜಾತಿ ಪಂಗಡ ಆಯೋಗ ನಮಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಆದೇಶಿಸಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಅದಕ್ಕೆ ತಡೆ ಹಾಕಿ ನಿಂತಿದೆ. ರಾಜ್ಯ ಸರ್ಕಾರದ ಈ ಧೋರಣೆ ವಿರುದ್ದ ನ್ಯಾಯ ದೊರೆಯುವವರೆಗೂ ಕಾನೂನಾತ್ಮಕ ಸೌಲಭ್ಯಕ್ಕಾಗಿ ಹೋರಾಟ ಮುಂದುವರೆಸುವದಾಗಿ ೩ ತಿಂಗಳ ಹಿಂದೆ ಪ್ರತಿಭಟನಾ ನಿರತರು ಎಚ್ಚರಿಸಿದ್ದರು.
ಪ್ರತಿಭಟನೆ ಆರಂಭವಾಗಿ ೩ ತಿಂಗಳೂ ಕಳೆದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆ ಆಗುತ್ತಿದೆ. ವರ್ಗಾವಣೆ ಪತ್ರದ ಖಾಲಂ ನಂ ೧೫ರಲ್ಲಿ ಯಾವುದೆ ಜಾತಿ ನಮೂದನೆ ಮಾಡದೆ, ಪ್ರಮಾಣ ಪತ್ರ ಲಭ್ಯವಿಲ್ಲ ಎಂದು ನಮೂದಿಸಿದ್ದಾರೆ. ನಮ್ಮ ಎಲ್ಲಾ ದಾಖಲಾತಿಗಳಲ್ಲಿ ಇದೆ ನಮೂನೆ ಮುಂದುವರೆದಿದೆ. ಸಂಬAಧ ಪಟ್ಟವರಲ್ಲಿ ವಿಚಾರಿಸಿದರೆ ಶಿಕ್ಷಣ ಇಲಾಖೆ ಯಾವುದೆ ಉತ್ತರ ನೀಡದೆ ವಂಚಿಸುತ್ತಿದೆ.
ಆಕ್ರೋಶಗೊಂಡ ವಿದ್ಯಾರ್ಥಿಗಳು ಜಾತಿ ಪ್ರಮಾಣಪತ್ರಕ್ಕಾಗಿ ಮತ್ತೆ ಬೀದಿಗಿಳಿದಿದ್ದಾರೆ. ಭಟ್ಕಳ ಸರ್ಕಲ ಬಳಿಯಿಂದ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಬಿಇಒ ಕಚೇರಿಗೆ ತೆರಳಿ ಮುತ್ತಿಗೆ ಹಾಕಿದ್ದಾರೆ. ನಿರಂತರವಾಗಿ ಸುರಿಯುವ ಮಳೆಯಲ್ಲೆ ಸರ್ಕಲ್ ಮುಖಾಂತರ ತಾಲೂಕು ಆಡಳಿತ ಸೌಧದ ಬಳಿ ಬಂದು ಪ್ರತಿಭಟನೆ ಮುಂದುವರೆಸಿದ್ದಾರೆ.
ಸ್ಥಳಕ್ಕೆ ತಹಸೀಲ್ದಾರ ಸುಮಂತ ಬಿ.ಇ ಬಂದು ಮನವಿ ತನ್ನ ಬಳಿ ನೀಡಿ ತಾನು ಜಿಲ್ಲಾಧಿಕಾರಿಗಳಿಗೆ ನೀಡುವದಾಗಿ ತಿಳಿಸಿದ್ದಾರೆ. ಈಗಾಗಲೆ ೧೪ ವರ್ಷಗಳಿಂದ ಇದೆ ಕೆಲಸವನ್ನು ನಾವು ಮಾಡುತ್ತಾ ಬಂದಿದ್ದು ಈಗಲೂ ಅದನ್ನೆ ಮಾಡುವದಿಲ್ಲ. ಜಿಲ್ಲಾಧಿಕಾರಿಗಳನ್ನೆ ಇಲ್ಲಿಗೆ ಕರೆಯಸಬೇಕು.
ನಾವು ಅವರ ಬಳಿ ಖುದ್ದಾಗಿ ಮನವಿ ನೀಡುತ್ತೇವೆ. ಜಾತಿ ಪ್ರಮಾಣ ಪತ್ರ ನೀಡದೆ ಇರುವದರಿಂದ ವಿದ್ಯಾರ್ಥಿಗಳು ಅತಿ ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದೇವೆ. ನಾವು ಇಂದು ಬೀದಿಗಿಳಿಯುವ ಸಂದರ್ಬ ತಂದು ಇಟ್ಟಿದ್ದೀರಿ. ನಮ್ಮ ಸಮಸ್ಯೆಗಳಿಗೆ ಭರವಸೆ ಅಲ್ಲಾ ಸ್ಪಂದನೆ ಬೇಕು. ಹಾಗಾಗಿ ಜಿಲ್ಲಾಧಿಕಾರಿಗಳೆ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು.
ಮಾಜಿ ಶಾಸಕÀ ಮಂಕಾಳು ವೈದ್ಯ ಮಾತನಾಡಿ ಶಾಲೆ ಬಿಟ್ಟು ವಿದ್ಯಾರ್ಥಿಗಳೆ ಸ್ವಯಂ ಪ್ರೇರಿತರಾಗಿ ಬೀದಿಗೆ ಬಂದಿರುವ ಈ ಬೆಳವಣಿಗೆ ಒಳ್ಳೆಯದಲ್ಲ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಬೇಡ ಈಗಲಾದರೂ ಸರ್ಕಾರ ಎಚ್ಚೆತ್ತು ಮೊಗೇರ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕಿದೆ ಎಂದರು.
ಪ್ರತಿಭಟನೆಯಲ್ಲಿ ೫ನೇ ತರಗತಿಯಿಂದ ಕಾಲೇಜಿನಲ್ಲಿ ಒದುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಿದ್ದರು. ತಾಲೂಕಾಧ್ಯಕ್ಷ ಅಣ್ಣಪ್ಪ ಮೊಗೇರ, ಮೊಗೇರ ಸಮಾಜದ ಮುಖಂಡರಾದ ಈಶ್ವರ ಗೊರ್ಟೆ, ಎಫ್ ಕೆ. ಮೊಗೇರ, ಕೃಷ್ಣ ಮೊಗೇರ, ದೇವಿದಾಸ ಮೊಗೇರ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಮೊಗೇರ, ವೆಂಕಟ್ರಮಣ ಮೊಗೇರ ಇತರರು ಭಾಗವಹಿಸಿದ್ದಾರೆ
ಭಟ್ಕಳ ಹಾಗೂ ಸುದ್ದಿಗಾಗಿ ಈ ಗ್ರುಪ್ ಸೇರಿ ; https://chat.whatsapp.com/CCdLQvKCIHJFyLu2WpU4xI
Leave a Comment