ಹೊನ್ನಾವರ: ಕೇಂದ್ರದ ಮೋದಿ ನೇತೃತ್ವದ ಬಿ.ಜೆ.ಪಿ. ಸರಕಾರ ಇಡಿ ಮತ್ತು ವಿವಿಧ ತನಿಖಾ ಸಂಸ್ಥೆಗಳನ್ನು ಬಳಿಸಿ ಕಾಂಗ್ರೇಸ್ ಮುಖಂಡರ ಮೇಲೆ ಅನ್ಯಗತ್ಯ ತನಿಖೆ ನಡೆಸಿ ಮಾನಸಿಕ ಹಿಂಸೆ ನೀಡುತ್ತಿರುವುದನ್ನು ವಿರೋಧಿಸಿ ಇಂದು ಹೊನ್ನಾವರ ಮತ್ತು ಮಂಕಿ ಬ್ಲಾಕ್ ಕಾಂಗ್ರೇಸ್ ಸಮಿತಿ ಹೊನ್ನಾವರ ಶರಾವತಿ ಸರ್ಕಲ್ ಬಳಿ ಮಳೆಯನ್ನು ಲೆಕ್ಕಿಸಿದೇ ಪ್ರತಿಭಟನೆ ನಡೆಸಿ ನಂತರ ಮೆರವಣಿಗೆಯ ಮೂಲಕ ನೂರಾರು ಕಾರ್ಯಕರ್ತರು, ಮಿನಿ ವಿಧಾನ ಸೌಧಕ್ಕೆ ತೆರಳಿ ತಹಸೀಲ್ದಾರ ನಾಗರಾಜ್ ನಾಯ್ಕಡ ಮೂಲಕ ರಾಷ್ಟçಪತಿ ರಾಮನಾಥ ಕೋವಿಂದಗೆ ಮನವಿ ರವಾನಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ, ನ್ಯಾಶನಲ್ ಹೆರಾಲ್ಡ ಎಂಬುದು ಸ್ವಾತಂತ್ರö್ಯ ಹೋರಾಟದಲ್ಲಿ ಸ್ಥಾಪಿತವಾದ ಪತ್ರಿಕೆ ಬ್ರಿಟಿಷರು ಕೂಡ ಸುಮಾರು ಐದು ವರ್ಷಗಳ ಕಾಲ ಈ ಪತ್ರಿಕೆಯನ್ನು ನಿಷೇದಿಸಿದ್ದರು.
ಇಂತಹ ಪವಿತ್ರ ಪತ್ರಿಕೆ ಆರ್ಥಿಕ ಸಂಕಷ್ಟದಲ್ಲಿದ್ದಾಗ ಅದನ್ನು ಉಳಿಸಿ ಬೆಳೆಸಿದ ಕಾಂಗ್ರೇಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರನ್ನು ಮಾನಸಿಕವಾಗಿ ಕುಗ್ಗಿಸಿ ವಿರೋಧ ಪಕ್ಷವೇ ದೇಶದಲ್ಲಿ ಇಲ್ಲದಂತೆ ಮಾಡುದ ಹುನ್ನಾರ ಮೋದಿ ಸರಕಾರದ ಉದ್ದೇಶವಾಗಿದೆ ಎಂದರು. ನಮ್ಮ ನಾಯಕರ ಮೇಲೆ ಇದೇ ರೀತಿ ದಾಳಿ ಮುಂದುವರಿಸಿದ್ದಲ್ಲಿ ಮುಂದಿನ ದಿನದಲ್ಲಿ ಕಾಂಗ್ರೇಸ್ ಪಕ್ಷ ದೇಶಾಧ್ಯಂತ ಉಗ್ರ ಹೋರಾಟ ನಡೆಸಿಲಿದೆ ಎಂದು ಎಚ್ಚರಿಸಿದರು.
ಮಂಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗೋವಿಂದ ನಾಯ್ಕ, ಮಾತನಾಡಿ ಕಳೆದ 8 ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ಮೋದಿ ಸರಕಾರ ಎಲ್ಲಾ ರಂಗಗಳಲ್ಲೂ ವಿಫಲವಾಗಿದೆ ಎಂದರು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿಸುವ ಅವರ ವಾಗ್ದಾನ ಹುಸಿಯಾಗಿದ್ದು, ವರ್ಷಕ್ಕೆ ಒಂದು ಲಕ್ಷ ಉದ್ಯೋಗ ಸೃಷ್ಠಿಸಲೂ ಆಗದ ಪರಿಸ್ಥಿತಿ ನೀರ್ಮಾಣವಾಗಿದೆ ಎಂದರು. ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು, ಅವರ ವಿರುದ್ಧ ಧ್ವನಿ ಎತ್ತುತ್ತಿರುವ ನಮ್ಮ ಪಕ್ಷದ ನಾಯಕರಾದ ರಾಹುಲಗಾಂಧಿ ಮತ್ತು ಸೋನಿಯಾ ಗಾಂಧಿಯವರ ಮೇಲೆ ಅನಗತ್ಯ ತನಿಖೆ ನಡೆಸಿ ಮಾನಿಸಿಕವಾಗಿ ಹಿಂಸೆ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕೇಂದ್ರ ಮತ್ತು ರಾಜ್ಯದ ಬಿ.ಜೆ.ಪಿ. ಸರಕಾರದ ವಿರುದ್ಧ ಕಾಂಗ್ರೇಸ್ ಕಾರ್ಯಕರ್ತರು ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು
.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಎನ್. ಸುಬ್ರಹ್ಮಣ್ಯ, ಡಿ.ಸಿ.ಸಿ. ಕಾರ್ಯದರ್ಶಿ ರವಿ ಶೆಟ್ಟಿ, ಕವಲಕ್ಕಿ, ಮಂಕಿ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ರಾಜು ನಾಯ್ಕ, ಮಂಕಿ ಬ್ಲಾಕ್ ಕಾಂಗ್ರೇಸ್ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ, ಕಿಸಾನ ಅಧ್ಯಕ್ಷ ಅಣ್ಣಪ್ಪ ನಾಯ್ಕ, ಮಹಿಳಾ ಕಾಂಗ್ರೇಸ್ ಅಧ್ಯಕ್ಷರಾದ ಪುಷ್ಪಾ ಮಹೇಶ ಮತ್ತು ಉಷಾ ನಾಯ್ಕ, ಅಲ್ಪಸಂಖ್ಯಾತ ಅಧ್ಯಕ್ಷರಾದ, ಜಕ್ರಿಯಾ ಶೇಖ್ ಹÀನೀಫ್ ಶೇಖ್, ಪರಿಶಿಷ್ಠ ಜಾತಿ ವಿಭಾಗದ ಅಧ್ಯಕ್ಷ ಕೃಷ್ಣ ಹರಿಜನ, ಸೇವಾಧಳದ ಕೃಷ್ಣ ಮಾರಿಮನೆ, ಪಕ್ಷದ ಹಿರಿಯ ಮುಖಂಡರಾದ ಯೋಗೇಶ ರಾಯ್ಕರ್, ಕೃಷ್ಣ ಗೌಡ, ಪುಷ್ಪಾ ನಾಯ್ಕ, ಅಶೋಕ ಕಾಸರಕೋಡ, ಲಂಭೋಧರ ನಾಯ್ಕ, ರಾಜೇಂದ್ರ ನಾಯ್ಕ, ಆಯ್. ವಿ. ನಾಯ್ಕ, ಇನ್ನೂ ನೂರಾರು ಕಾರ್ಯಕರ್ತರು ಪಾಲ್ಗೋಂಡಿದ್ದರು.
Leave a Comment