ಯಲ್ಲಾಪುರ : ಬಸ್ ನಿಲ್ದಾಣದ ಸಂಪೂರ್ಣ ಸಿ.ಜಿ.ಐ. ಸೀಟುಗಳನ್ನ ಕಳ್ಳತನ ಮಾಡಿರುವ ಘಟನೆ ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಭಾಬನಕುಂಬ್ರಿಯಲ್ಲಿ ಬೆಳಕಿಗೆ ಬಂದಿದೆ.
ಕೆಲವು ವರ್ಷಗಳ ಹಿಂದೆ ಭಾಬನಕುಂಬ್ರಿಯ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿತ್ತು. ಹಲವು ಮನೆಗಳಿರುವ ಈ ಭಾಗದಲ್ಲಿಯ ಜನ ಹಾಗೂ ವಿದ್ಯಾರ್ಥಿಗಳು ಬೇಸಿಗೆ ಮಳೆಗಾಲದಲ್ಲಿ ಬಿಸಿಲು – ಮಳೆಯಿಂದ ರಕ್ಷಿಸಿಕೊಳ್ಳಲು ಆಶ್ರಯ ಪಡೆಯುತ್ತಿದ್ದರು. ಆದರೆ ಯಾರೋ ದುಷ್ಕರ್ಮಿಗಳು ಬಸ್ ಸ್ಟಾಪ್ ನ ಸಂಪೂರ್ಣ ಮೇಲ್ಚಾವಣಿಯಲ್ಲಿ ಕಿತ್ತು ಕೊಂಡು ಹೋಗಿದ್ದಾರೆ.
ಇದೀಗ ಬಸ್ ನಿಲ್ದಾಣ ಇದ್ದರೂ ಕೂಡ ಸಾರ್ವಜನಿಕ ಬಳಕೆಗೆ ಬಾರದಂತಾಗಿದೆ. ಅಷ್ಟೇ ಅಲ್ಲದೆ ಇದೇ ಬಸ್ ಸ್ಟಾಪ್ ಒಳಗೆ ಕೆಲವು ಕಿಡಿಗೇಡಿಗಳು ಮಧ್ಯ ಸೇವಿಸಿ ಬಿಟ್ಟಿ ಸ್ಯಾಚೇಟ್, ಬಾಟಲಿಗಳು ಅಲ್ಲಿಯೇ ಎಸೆದಿರುವ ಕಾರಣಕ್ಕೆ ಸಭ್ಯಸ್ತ ವ್ಯಕ್ತಿಗಳು ಅಲ್ಲಿ ಕುಳ್ಳಲಾರದಂತಾಗಿದೆ.
ಬಸ್ ನಿಲ್ದಾಣವನ್ನು ದುರಸ್ತಿ ಪಡಿಸಬೇಕು, ಮುಂದೆ ಕಳ್ಳಕಾಕರು ಸೀಟುಗಳನ್ನು ಕಳ್ಳತನ ಮಾಡದಂತೆ ಅಳವಡಿಸಬೇಕು. ಬಸ್ಟಾಪ್ನೊಳಗೆ ಕುಡಿದು ಗಲಿಜು ಮಾಡಿರುವ ಕಿಡಿಗೇಡಿಗಳನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೃಗೊಳ್ಳಬೇಕೆಂದು ಸ್ಥಳೀಯ ನಿವಾಸಿ ಝಕ್ರಿಯಾ ಆಗ್ರಹಿಸಿದ್ದಾರೆ.
Leave a Comment