ಕಾರವಾರ : ಅಂಕೋಲಾ ತಾಲೂಕಿನ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ಇಂಗ್ಲೀಷ್, ವಿಜ್ಞಾನ ಹಾಗೂ ಕಂಪ್ಯೂಟರ್ ವಿಷಯಗಳಿಗೆ ಭೋಧಿಸಲು ತಾತ್ಕಾಲಿಕ ಶಿಕ್ಷಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಮಹಿಳಾ ಅಭ್ಯರ್ಥಿಗಳು ಕಡ್ಡಾಯವಾಗಿ ಇಂಗ್ಲೀಷ್ ಶಿಕ್ಷಕರು ಬಿ.ಎ, ಬಿ,ಇಡಿ, ಹಾಗೂ ಐಚ್ಛಿಕ ವಿಷಯ ಇಂಗ್ಲೀಷ್, ಸಿ.ಬಿ.ಝಡ್, ಕಂಪ್ಯೂಟರ್ ಶಿಕ್ಷಿಕರು ಎಮ್.ಸಿ.ಎ ಅಥವಾ ಬಿ.ಸಿ.ಎ ಕಂಪ್ಯೂಟರ್ ಸೈನ್ಸ್ ಆಗಿರುವ ಅಭ್ಯರ್ಥಿಗಳು ಜೂ. 25 ರೊಳಗೆ ಸ್ವ ವಿವರ ಮತ್ತು ವಿದ್ಯಾರ್ಹತೆಯ ದಾಖಲೆಗಳನ್ನು ವಸತಿ ಶಾಲೆಗೆ ಸಲ್ಲಿಸಬೇಕು. ಹಾಗೂ ಆಯ್ಕೆ ಯಾದ ಅಭ್ಯರ್ಥಿಗಳಿಗೆ ಮಾಸಿಕ 10000 ಗೌರವಧನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9740324353 ಗೆ ಸಂಪರ್ಕಿಸಿ ಎಂದು ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment