ಹುಬ್ಬಳ್ಳಿ: ನಗರದ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯು ಪ್ರಸಕ್ತ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಹವ್ಯಕ ಸಮಾಜದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಂಡಿದೆ.
ಜೂನ್ 26ರಂದು ಹವ್ಯಕ ಭವನದಲ್ಲಿ ನಡೆಯುವ ಹವ್ಯಕ ಹಬ್ಬದಲ್ಲಿ ಈ ಪ್ರತಿಭಾ ಪುರಸ್ಕಾರ ನಡೆಯುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಅಂಕಪಟ್ಟಿಯ ನಕಲು ಪ್ರತಿಯೊಂದಿಗೆ ಅರ್ಜಿಗಳನ್ನು ಅಧ್ಯಕ್ಷರು, ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ, ಲೂತಿಮಠ ಲೇಔಟ್ ಹತ್ತಿರ, ಗೋಕುಲ ರಸ್ತೆ, ಹುಬ್ಬಳ್ಳಿ ಈ ವಿಳಾಸಕ್ಕೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ವಿವರಗಳಿಗೆ ಮೂರ್ತಿ ಹೆಗಡೆ (9448560654), ವೀಣಾ ಹೆಗಡೆ (9986399594), ಮಧುರಾ ಹೆಗಡೆ (9482740344), ಎಸ್.ಎನ್.ಭಟ್ಟ (9449452472) ಅವರನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಅಧ್ಯಕ್ಷ ગ્ ವಿ.ಎಂ.ಭಟ್ಟ ತಿಳಿಸಿದ್ದಾರೆ.
Leave a Comment