ನವದೆಹಲಿ : ವಾಯುಪಡೆಗೆ ಯುವಕರಿಂದ ನಿರೀಕ್ಷೆಗೂ ಮೀರಿ ಅರ್ಜಿ ಸಲ್ಲಿಕೆಯಾಗುತ್ತಿದ್ದು, 3000 ಸ್ಕಾಟ್ ಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಮೂರೇ ದಿನದಲ್ಲಿ 56,960 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ 5 ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದು, ಆದರೆ ಪ್ರಸಕ್ತ ವರ್ಷದಲ್ಲಿ 3000 ಅಗ್ನೀವೀರರ ಆಯ್ಕೆಗೆ ಮಾತ್ರ ಅವಕಾಶವಿದ್ದು, ಒಂದು ಪರೀಕ್ಷೆ ಹಾಗೂ ಆರೋಗ್ಯ ತಪಾಸಣೆ ಬಳಿಕ ಇದೇ ಡಿಸೆಂಬರ್ ತಿಂಗಳಿನಿAದ ತರಬೇತಿ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ.
ಅಗ್ನಿಪಥ ಯೋಜನೆಗೆ ವಿರೋಧಿಸಿ ದೇಶಾದ್ಯಂತ ಹಲವಡೆ ಭಾರೀ ಪ್ರತಿಭಟನೆಗಳು ನಡೆಸಲಾಗಿತ್ತು. ಆದರೆ ದೇಶದ ಹಿತದೃಷ್ಟಿಯಿಂದಾಗಿ ಯಾವುದೇ ಕಾರಣಕ್ಕೂ ಇದನ್ನು ಹಿಂಪಡೆಯಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟ ಸಂದೇಶ ರವಾನೆ ಮಾಡಿತ್ತು.
ಸದ್ಯ ನಿರೀಕ್ಷೆಗೂ ಮೀರಿ ಯುವಕರಿಂದ ಅರ್ಜಿ ಸಲ್ಲಿಕೆಯಾಗಿರುವುದು ಯೋಜನೆಗೆ ವ್ಯಕ್ತವಾದ ಬೆಂಬಲ ಆಗಿದೆ. ಎಂದು ವಿಶ್ಲೇಷಿಸಲಾಗುತ್ತಿದೆ. ಯೋಧರಾಗುವ ಕನಸು ಕಾಣುವ ಯುವಕರಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ಯುವಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
Leave a Comment