ಕುವೈತ್ ನಿಂದ ದೇಶಿ ಹಸುಗಳ ಸಗಣಿಯನ್ನು ಭಾರತದಿಂದ ಆಮದು ಮಾಡಿಕೊಳ್ಳುತ್ತಿರುವುದು ಬಹುಶಃ ಇದೇ ಮೊದಲು ಎಂದು ಕಂಪನಿಯ ನಿರ್ದೇಶಕ ಪ್ರಶಾಂತ್ ಚತುರ್ವೇದಿ ಹೇಳುತ್ತಾರಿ. ಜೈಪುರದ ಸನ್ ರೈಸ್ ಆರ್ಗಾನಿಕ್ ಪಾರ್ಕ್ನಲ್ಲಿ ಕಸ್ಟಮ್ಸ್ ಇಲಾಖೆಯ ಮೇಲ್ವಿಚಾರಣೆಯಲ್ಲಿ ಕಂಟೈನರ್ಗಳಲ್ಲಿ ಹಸುವಿನ ಸಗಣಿ ಪ್ಯಾಕ್ ಮಾಡಿದೆ. ಇದರ ಮೊದಲ ರವಾನೆಯಾಗಿ ಜೂನ್ 15 ರಂದು ಕನಕಪುರ ರೈಲು ನಿಲ್ದಾಣದಿಂದ ಮೊದಲ ಕಂತು ಗಡಿಯಾಚೆ ದಡ ಸೇರಿದೆ.
2020 -21 ರಲ್ಲಿ ಭಾರತದಿಂದ ಪ್ರಾಣಿ ಉತ್ಪತ್ನಗಳ ರಫ್ತು ಮೌಲ್ಯ 27,155.56 ಕೋಟಿ ರೂ. ಗಳಾಗಿತ್ತು. ಇದರ ಜೊತೆಗೆ ಸಾವಯವ ಗೊಬ್ಬರದ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ದೇಶೀಯ ಹಸುವಿನ ಸಗಣಿ ಸಂಶೋಧನೆಯ ನಂತರ ಅನೇಕ ದೇಶಗಳು ಇದು ಬೆಳೆಗಳ ಉತ್ಪಾದನೆಯನ್ನು ಹೆಚ್ಚಿಸುವುದಲ್ಲದೆ, ಆದರಿಂದ ಉತ್ಪತ್ತಿಯಾಗುವ ಉತ್ಪನ್ನಗಳ ಬಳಕೆಯ ಗಂಭೀರ ಕಾಯಿಲೆಗಳಿಂದ ಮನುಷ್ಯರನ್ನು ಮುಕ್ತಗೊಳಿಸುತ್ತದೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಅನೇಕ ದೇಶಗಳು ಭಾರತದಿಂದ ಸಾವಯವ ಗೊಬ್ಬರದ ಜೊತೆಗೆ ದೇಶಿ ಹಸುವಿನ ಸಗಣಿ ಆಮದು ಮಾಡಿಕೊಳ್ಳಲು ಆರಂಭಿಸಿವೆ.
ಖರ್ಜೂರ ಬೆಳೆಗೆ ಬಳಕೆ
ಖರ್ಜೂರದ ಬೆಳೆಗೆ ಪೌಡರ್ ರೂಪದಲ್ಲಿ ದೇಶಿ ಗೋಮಯವನ್ನು ಬಳಸುವುದರಿಂದ ಹಣ್ಣಿನ ಗಾತ್ರದಲ್ಲಿ ಹೆಚ್ಚಳ ಹಾಗೂ ಉತ್ಪಾದನೆಯಲ್ಲಿ ನಿರೀಕ್ಷಿತ ಹೆಚ್ಚಳ ಕಂಡುಬಂದಿರುವುದನ್ನು ಕುವೈತ್ ನ ಕೃಷಿ ವಿಜ್ಞಾನಿಗಳು ವ್ಯಾಪಕ ಸಂಶೋಧನೆಯ ನಂತರ ಕಂಡುಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಕುವೈತ್ ಮೂಲದ ಲಾಮೋರ್ ಕಂ. ಜೈಪುರದ ಸಂಸ್ಥೆಯಿಂದ 192 ಮೆಟ್ರಿಕ್ ಟನ್ ದೇಶಿ ಹಸುವಿನ ಸಗಣಿ ಆಮದು ಮಾಡಿಕೊಳ್ಳಲು ಆರ್ಡರ್ ಮಾಡಿದೆ. ಇಲ್ಲೊಂದು ಗಮನಾರ್ಹ ವಿಷಯವೆಂದರೆ ಭಾರತವು ಹಸುವಿನ ಸಗಣಿಯನ್ನು ಅತಿ ಹೆಚ್ಚು ರಫ್ತು ಮಾಡುವ ದೇಶವಾಗಿದೆ. ಹೆಚ್ಚಿನ ಸಾಗಣೆಯು ಮಾಲೀವ್, ಯುನೈಟೆಡ್ ಸ್ಟೇಟ್ಸ್ ಮತ್ತು ಮಲೇಷ್ಯಾಕ್ಕೆ ಆಗಿರುತ್ತದೆ.
ಗಲ್ಫ್ ಸಹಕಾರ ಮಂಡಳಿ(ಜಿಸಿಸಿ)ಯಲ್ಲಿರುವ ಇತರ ದೇಶಗಳಂತೆ ಕುವೈತ್, ದೇಶದ ಆಹಾರದ ಅವಶ್ಯಕತೆಗಳನ್ನು ಪೂರೈಸಲು ಆಮದುಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ.ಹವಾಮಾನ ಮತ್ತು ನೀರಿನ ಕೊರತೆಯು ದೇಶದಲ್ಲಿ ಸಾಂಪ್ರದಾಯಿಕ ಕೃಷಿಯನ್ನು ಬಹುತೇಕ ಅಸಾಧ್ಯವಾಗಿಸಿದೆ. ಈ ಹಿನ್ನೆಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೃಷಿಯನ್ನು ಪ್ರೋತ್ಸಾಹಿಸುವ ಪ್ರಯತ್ನಗಳು ನಡೆಯುತ್ತಿವೆ, ಇದನು ಕುವೈತ್ನಲ್ಲಿ ಇನ್ನೂ ಅನೇಕರು ಹವ್ಯಾಸವಾಗಿ ಮಾಡುತ್ತಾರೆ. ಅಂತೆಯೇ ದೇಶವು ಸ್ಥಳೀಯ ಪರಿಸ್ಥಿತಿಗಳಿಗೆ ಅಳವಡಿಸಿಕೊಳ್ಳಲು ಪ್ರಪಂಚದಾದ್ಯಂತ ಸಾವಯವ ಕೃಷಿ ತಂತ್ರಗಳನ್ನು ಅಧ್ಯಯನ ಮಾಡುತ್ತಿದೆ.
Leave a Comment