ಕುಮಟಾ : ಪಟ್ಟಣದ ಕೆ.ಎಸ್, ಆರ್,ಟಿ,ಸಿ ಬಸ್ ನಿಲ್ದಾಣದಲ್ಲಿ ಮಹಿಳೆಯ ಬ್ಯಾಗ್ ತೆರೆದು ಅದರಲ್ಲಿದ್ದ ಬಂಗಾರದ ಆಭರಣ ಮತ್ತು ನಗದು ಕಳ್ಳತನ ನಡೆಸಿದ ಮೂವರನ್ನು ಕುಮಟಾ ಪೊಲೀಸರು ಬಂಧಿಸಿದ್ದಾರೆ.
ಬೆAಗಳೂರಿನ ಅತ್ತಿಬೆಲೆ ಆನೆಕಲ್ ರೋಡ್ ನ ಮಾರಿಯಮ್ಮ ದೇವಸ್ಥಾನದ ಸಮೀಪದ ನಿವಾಸಿಗಳಾದ ಆದಿಯಮ ತಿರುಪತಿ(42), ವೆಂಕಮ್ಮ ತಿರುಪತಿ, ಲಲಿತಾ ನಾಗರಾಜ (32) ಬಂಧಿತ ಆರೋಪಿಗಳಾಗಿದ್ದಾರೆ. ಈ ಮೂವರು ಸೇರಿ ಕುಮಟಾ ಪಟ್ಟಣದಲ್ಲಿ ಮಹಿಳೆಯೋರ್ವಳು ಬಸ್ ಹತ್ತುವಾಗ ಬ್ಯಾಗ್ ಜೀಪ್ ತೆರೆದು ಅದರಲ್ಲಿ ಸುಮಾರು 124 ಗ್ರಾಂ ತೂಕದ ತೂಕದ ಬಂಗಾರದ ಆಭರಣಗಳನ್ನು ಮತ್ತು 50 ಸಾವಿರ ನಗದು ಕಳ್ಳತನ ನಡೆಸಿದ್ದರು.
ಈ ಕುರಿತು ದಾಖಲಿಸಿಕೊಂಡ ಕುಮಟಾ ಪೊಲೀಸರು, ಮೂವರು ಮಹಿಳೆಯರನ್ನು ಬಂಧಿಸಿ, ಎಲ್ಲ ಬಂಗಾರದ ಆಭರಣಗಳನ್ನು ಮತ್ತು 6030 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಪಿ.ಐ ತಿಮ್ಮಪ್ಪ ನಾಯ್ಕ ಮಾರ್ಗದರ್ಶನದಲ್ಲಿ ಪಿ.ಎಸ್ ಐ ನವೀನ ನಾಯ್ಕ, ಪದ್ಮಾ ದೇವಳಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ದಯಾನಂದ ನಾಯ್ಕ, ಗಣೇಶ ನಾಯ್ಕ, ರಾಜು ನಾಯ್ಕ, ಸಂತೋಷ ಬಾಳೇರ, ಬಸವರಾಜ ಜಾಡರ್, ಕೃಷ್ಣ.ಎನ್.ಜಿ, ದುರ್ಗಪ್ಪ ಕಲಘಟಗಿ, ಗುರು ನಾಯಕ, ಶಿವಾನಂದ ಜಾಡರ, ಅಶ್ವಿನ ಹರಿಕಂತ್ರ, ಅರ್ಚನಾ ಪಟಗಾರ, ಮಾದೇವಿ ಗೌಡ, ರೂಪಾ ನಾಯಕ, ವಿದ್ಯಾ ನಾಯ್ಕ, ಸಾಧನಾ ನಾಯಕ, ರಾಧಾ ಗೌಡ ಕಾರ್ಯಾಚರಣೆಯಲ್ಲಿ ಪಾಲ್ಗೊ0ಡಿದ್ದರು.
Leave a Comment