ಬೆಂಗಳೂರು: ಮುಂಗಾರು ರಾಜ್ಯಕ್ಕೆ ಆಗಮಿಸಿ ಒಂದು ತಿಂಗಳುಕಳೆಯುತ್ತ ಬಂದಿದ್ದು, ರಾಜ್ಯಾದ್ಯಂತವಾಡಿಕೆಯಂತೆ 190 ಮಿಮೀ ಮಳೆಯಾಗಬೇಕಿತ್ತು. ಆದರೆ, 145 ಮಿಮೀ ಮಳೆಯಾಗಿದ್ದು, ಶೇ. 24 ಮಳೆ ಕುಂಠಿತವಾಗಿದೆ.
ದಕ್ಷಿಣ ಒಳನಾಡಿನಲ್ಲಿ ವಾಡಿಕೆಯಂತೆ 64 ಮಿಮೀ ಮಳೆ ಬದಲು 118 ಮಿಮೀ ಮಳೆಯಾಗಿದ್ದು, ಶೇ. 84 ಹೆಚ್ಚು ಮಳೆ ಬಿದ್ದಿದೆ. ಉತ್ತರ ಒಳನಾಡಿನಲ್ಲಿ 100 ಮಿಮೀ ಮಳೆ ಬದಲಾಗಿ 86 ಮಿಮೀ ಮಳೆಯಾಗಿದ್ದು, ಶೇ.14 ಕೊರತೆ ಎದುರಾಗಿದೆ.
ಮಲೆನಾಡು ಭಾಗಗಳಲ್ಲಿ 343 ಮಳೆಯಾಗಬೇಕಿತ್ತು. 175 ಮಿಮೀ ಮಳೆಯಾಗಿದ್ದು, ಶೇ.49ರಷ್ಟು ಮಳೆ ಕ್ಷೀಣಿಸಿದೆ. ಕರಾವಳಿ ಜಿಲ್ಲೆಗಳಲ್ಲಿ 790 ಮಿಮೀ ಮಳೆ ಬದಲಾಗಿ 464 ಮಿಮೀ ಮಳೆಯಾಗಿದ್ದು, ಶೇ.41 ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.
ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಕರಾವಳಿಯಲ್ಲಿ ಮುಂದುವರಿಯಲಿದೆ. ಬುಧವಾರ ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಮಿಮೀ 70 ಮಳೆಯಾಗಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಜೂ 30ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಕೊಟ್ಟಿದೆ.ಜು1ರಿಂದಜು3ರವರೆಗೆ ಈ ಜಿಲ್ಲೆಗಳಲ್ಲಿಯೆಲ್ಲೋ ಅಲರ್ಟ್ ಇರಲಿದೆ. ಮಲೆನಾಡು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಮುಂದಿನ 4 ದಿನ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
Leave a Comment