ಅಂಕೋಲಾ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಜಿಲ್ಲಾ ವಿಶೇಷ ವಿಭಾಗದ ಪೊಲೀಸರು ಗುರುವಾರ ಅಂಕೋಲಾ ಹೊಸಕಂಬಿ ಕ್ರಾಸ್ ಬಳಿ ಬಂಧಿಸಿದ್ದಾರೆ.

ವಾಡಗಾರ ಅಚವೆ ಗ್ರಾಮದ ವಿಷ್ಣು ಮರಾಠಿ ಬಂಧಿತ ವ್ಯಕ್ತಿ, ಆತನಿಂದ 55 ಸಾವಿರ ರೂ. ಮೌಲ್ಯದ 905 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ವಿಶೇಷ ವಿಭಾಗದ ಪಿಎಸ್‌ಐ ಪ್ರೇಮನಗೌಡ ಪಾಟೀಲ, ಸಿಬ್ಬಂದಿ ರಾಘವೇಂದ್ರ ಜಿ., ಭಗವಾನ್ ಗಾಂವಕರ್, ವೀರೇಶ ನಾಯ್ಕ ಕಾಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Leave a Comment