ಹೊನ್ನಾವರ : ಪೋರ್ಜರಿ ಸಹಿ ಮಾಡಿ ಆರೋಪಿಗೆ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ಮತ್ತು ರೂ. 30 ಸಾವಿರ ದಂಡ ವಿಧಿಸಿದೆ.
ಕುಮಟಾದ ದೇವರಹಕ್ಕಲದ ಪ್ರಭಾತನಗರ ನಿವಾಸಿಯಾದ ರವೀಂದ್ರ ವಾಸುದೇವ ನಾಯ್ಕ ಬಂಧಿತ ಆರೋಪಿಯಾಗಿದ್ದು, ತಾಲೂಕು ಪಂಚಾಯತ್ ನಲ್ಲಿ ಎಫ್ ಡಿಸಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಬ್ಯಾಂಕಿನ ಲೆಟರ್ ಹೆಡ್ ಮತ್ತು ಫಾರ್ಮ್ ನಂ. 35 ರಲ್ಲಿ ಬ್ಯಾಂಕಿನವರು ಹೈಫೋಥಿಕೇಶನ್ ಸ್ಥಗಿತಗೊಳಿಸಲು ಹೊನ್ನಾವರ ಎಆರ್ಟಿಓಗೆ ಬ್ಯಾಂಕಿನಿAದ ತಂದಿರುವ ಪತ್ರದಂತೆ ನಕಲಿಸಿದ್ದ ಪತ್ರವನ್ನು ನೀಡಿದ್ದರು. ಅಲ್ಲದೇ ಬ್ಯಾಂಕ್ ವ್ಯವಸ್ಥಾಪಕರ ನಕಲಿ ಸಹಿ ಮಾಡಿ ಪತ್ರದ ಮೇಲೆ ಬ್ಯಾಂಕ್ ಸೀಲ್ ಅನ್ನು ಹಾಕಿದ್ದಾರು.
ನಕಲಿ ಫಾರ್ಮ್ ನ್ನು ಎಆರ್ಟಿಓ ಕಚೇರಿಯಲ್ಲಿ ಹಾಜರುಪಡಿಸಿ ತಮ್ಮ ವಾಹನಕ್ಕೆ ಬ್ಯಾಂಕಿನೊAದಿಗೆ ಇರುವ ಹೈಪೋಥಿಕೇಶನ್ ಸ್ಥಗಿತಗೊಳಿಸಿಕೊಂಡು ಬ್ಯಾಂಕಿನ ಮೋಸ ಮಾಡಿದ್ದರು ಎನ್ನಲಾಗಿದೆ.
ರವೀಂದ್ರ ಅಕ್ಟೋಬರ್ 17, 2008 ರಂದು ತನ್ನ ವಾಹನವನ್ನು ಖರೀದಿಗಾಗಿ ಕುಮಟಾ ಕಾರ್ಪೋರೇಶನ್ ಬ್ಯಾಂಕಿನಿAದ 5.70 ಸಾವಿರ ಸಾಲ ಪಡೆದಿದ್ದರು. ಸಾಲ ಮರುಪಾವತಿಸದೆ ತನ್ನ ವಾಹನಕ್ಕೆ ಈ ಬ್ಯಾಂಕಿನೊAದಿಗೆ ಇರುವ ಹೈಪೋಥಕೇಶನ್ ಸ್ಥಗಿತಗೊಳಿಸಿದ್ದನು.
ಪುನಃ ಬೇರೆ ಬ್ಯಾಂಕಿನಿAದ ಇದೇ ವಾಹನದ ಮೇಲೆ ಸಾಲ ಪಡೆಯುವ ದುರುದ್ದೇಶದಿಂದ ಇನ್ನೋರ್ವ ಆರೋಪಿ ಮಹೇಶ ನಾಯ್ಕ ಸಹಾಯ ಪಡೆದಿದ್ದು, ಬ್ಯಾಂಕಿಗೆ ಸಂಬAಧಿಸಿದ ಲೇಟರ್ ಹೆಡ್ ಮತ್ತು ಸೀಲ್ ಸೃಷ್ಟಿಸಿಕೊಂಡಿದ್ದರು. ಬ್ಯಾಂಕಿಗೆ ಮೋಸ ಮಾಡಿದ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Leave a Comment