ಕಾರವಾರ: ಕೇಂದ್ರ ಪುರಸ್ಕೃತ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳ ಬೆಳೆಯುಳ್ಳ ಹೈನುಗಾರಿಕೆಗೆ ಯೋಗ್ಯವಾದ ಒಂದು ವರ್ಷ ಮೆಲ್ಪಟ್ಟ ಮತ್ತು 8 ವರ್ಷಗಳಿಗೆ ಮೀರದ ಹಸು, ಆಕಳು, ಎಮ್ಮೆಗಳಿಗೆ ಒಂದು ವರ್ಷದ ಹಾಗೂ ಮೂರು ವರ್ಷದ ಅವಧಿಗೆ ವಿಮಾ ಮಾಡಿಸಲಾಗುವುದು.
ಮಾರುಕಟ್ಟೆ ಮೌಲ್ಯದ ಶೇಕಡಾ 2 ಮತ್ತು 6 ಪ್ರಿಮಿಯಮ್ ದರದಲ್ಲಿ ಗರಿಷ್ಟ ರೂಪಾಯಿ 70 ಸಾವಿರ ಮೂಲ ಬೆಲೆಯವರೆಗೆ ಏಮೆ ಸೌಲಭ್ಯ ಒದಗಿಸಲಾಗುತ್ತಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬಿಪಿಎಲ್ ಫಲಾನುಭವಿಗಳಿಗೆ 70%ರಷ್ಟು ಸರ್ಕಾರದ ಸಹಾಯಧನ, ಎಪಿಎಲ್ ಫಲಾನುಭವಿಗಳಿಗೆ 50%ರಷ್ಟು ಸಹಾಯಧನದ ದರದಂತೆ ವಿಮೆ ಸೌಲಭ್ಯ ಒದಗಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ) ಅಂಕೋಲಾ ಮೊ.ಸಂ: 94497 53809, ಭಟ್ಕಳ: 79758 22175, ಹಳಿಯಾಳ 8310 058105, ಹೊನ್ನಾವರ : 94486 11350, ಕಾರವಾರ: 99162 84949, ಕುಮಟಾ: 94492 09013, ಮುಂಡಗೋಡ: 82773 68777, ಸಿದ್ದಾಪುರ: 94490 53634. ಶಿರಸಿ 94499 00592, ಯಲ್ಲಾಪುರ : 90087 19397, ಜೋಯಿಡಾ: 95355 64885ಗೆ ಸಂಪರ್ಕಿಸಬಹುದು ಎಂದು ಕಾರವಾರ ಪಶುಪಾಲನೆ ಮತ್ತು ಪಶುವೈದ್ಯ ಸೇವೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment