ಕೇರಳದ ಪಾಲಕ್ಕಾಡ್ ಜಿಲ್ಲೆಯ ಶ್ರೀಲಕ್ಷ್ಮಿ (19) ಮೃತ ಯುವತಿ ಎಂದು ತಿಳಿದುಬಂದಿದೆ.ಮೇ 30ರಂದು ಪಕ್ಕದ ಮನೆಯ ನಾಯಿ ಕಚ್ಚಿತ್ತು.ಬಳಿಕ ವೈದ್ಯರ ಸಲಹೆಯಂತೆ ಅಗತ್ಯಲಸಿಕೆಗಳನ್ನು ವಿದ್ಯಾರ್ಥಿನಿ ತೆಗೆದುಕೊಂಡಿದ್ದರು.

ಆರಂಭಿಕ ದಿನಗಳಲ್ಲಿ ಯುವತಿಗೆ ಯಾವುದೇ ರೋಗಲಕ್ಷಣಗಳು ಕಂಡುಬAದಿರಲಿಲ್ಲ.ಕೆಲವು ದಿನಗಳ ಹಿಂದೆ ರೇಬೀಸ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಾಗ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ನಂತರ ಹೆಚ್ಚಿನ ಚಿಕಿತ್ಸೆಗಾಗಿ ತ್ರಿಶೂರ್ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿತ್ತು.ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿ ಕೊನೆಯುಸಿರೆಳೆದಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ರಾಜ್ಯ ಆರೋಗ್ಯ ಇಲಾಖೆಯ ನಿರ್ದೇಶಕರಿಗೆ ಸೂಚಿಸಿದ್ದಾರೆ.
Leave a Comment