ಹೊನ್ನಾವರ: ತಾಲೂಕು ಕೃಷಿ ಇಲಾಖೆ 2022- 23ನೇ ಸಾಲಿನ ಕೃಷಿ ಇಲಾಖೆಯ ಕೃಷಿ ಪ್ರಶಸ್ತಿಗೆ ಅರ್ಹ ರೈತ ಮತ್ತು ರೈತ ಮಹಿಳೆಯರಿಂದ ಅರ್ಜಿ ಆಹ್ವಾನಿಸಿದೆ.
ತಾಲೂಕಿನಲ್ಲಿ 15 ಕೃಷಿ ಪ್ರಶಸ್ತಿ ಅರ್ಜಿಗೆ ಅವಕಾಶ ಇದ್ದು ಕನಿಷ್ಠ 1 ಎಕರೆ ವಿಸ್ತೀರ್ಣ ಇರಬೇಕು. ಆಸಕ್ತ ರೈತರು ಆ.31ರೊಳಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರವಾದ ಹೊನ್ನಾವರ, ಹಡಿನಬಾಳ, ಮಂಕಿ, ಕೃಷಿ ಅಧಿಕಾರಿಗಳು ಹಾಗೂ ತಾಲೂಕು ತಾಂತ್ರಿಕ ವ್ಯವಸ್ಥಾಪಕರು ಹೊನ್ನಾವರ ಅಥವಾ ಸಹಾಯಕ ತಾಂತ್ರಿಕ ವ್ಯವಸ್ಥಾಪಕರು ಹಡಿನಬಾಳ, ಮಂಕಿ ಇವರನ್ನು ಸಂಪರ್ಕಿಸುವಂತೆ ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಪುನೀತಾ ಎಸ್.ಬಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment